ರಾಜ್ಯಪಾಲರ ವಿರುದ್ಧವೇ ಕಾನೂನು ಸಮರಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು, ಗುರುವಾರ, 17 ಮೇ 2018 (08:48 IST)

ಬೆಂಗಳೂರು: ಜೆಡಿಎಸ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡರೂ ಇದುವರೆಗೆ ಸರ್ಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲ ವಜುಬಾಯಿವಾಲಾ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ.
 
ಬಿಜೆಪಿಗೆ ಬಹುಮತವಿಲ್ಲ. ಹಾಗಿದ್ದರೂ ಅದು ಸರ್ಕಾರ ರಚಿಸಲು ಹೇಗೆ ಸಾಧ್ಯ? ಇದರ ಅರ್ಥ ಅವರು ಕುದುರೆ ವ್ಯಾಪಾರಕ್ಕೆ ತೊಡಗುತ್ತಾರೆ ಎಂದಲ್ಲವೇ? ರಾಜ್ಯಾಪಾಲರು ಇದಕ್ಕೆ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
 
ರಾಜ್ಯಪಾಲರ ವಿಳಂಬ ನೀತಿಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರ್ಧಾರ ಕೈಗೊಂಡಿದ್ದಾರೆ. ಈ ಕಾನೂನು ಹೋರಾಟಕ್ಕೆ ಸ್ವತಃ ವಕೀಲರಾಗಿರುವ ಚಿದಂಬರಂ ಅವರೇ ನೇತೃತ್ವ ವಹಿಸಲಿದ್ದಾರೆ.  ತಡರಾತ್ರಿಯೇ ಸಿಜೆಇ ಮನೆಗೆ ತೆರಳಿದ ಕಾಂಗ್ರೆಸ್ ನಿಯೋಗ ಯಡಿಯೂರಪ್ಪಗೆ ಸರ್ಕಾರ ರಚಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರಲ್ಲದೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತಕ್ಷಣವೇ ಸರ್ಕಾರ ರಚಿಸಲು ಆಹ್ವಾನ ನೀಡಬೇಕು ಎಂದು ಕೋರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಕರ್ನಾಟಕ ರಾಜಕೀಯ ಪಿ ಚಿದಂಬರಂ ರಾಜ್ಯ ಸುದ್ದಿಗಳು Congress Jds Bjp Karnataka Politcis P Chidambaram State News

ಸುದ್ದಿಗಳು

news

ನನ್ನನ್ನು ಖರೀದಿಸುವವರು ಇನ್ನೂ ಹುಟ್ಟಿಲ್ಲ: ಕುಮಾರಸ್ವಾಮಿ ಖಡಕ್ ನುಡಿ

ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬಾರದು. ಹಾಗೆ ಮಾಡಿದರೆ ಶಾಸಕರ ...

news

ಎಚ್ ಡಿಕೆಯೂ ಸಿಎಂ ಆಗಲ್ಲ, ಬಿಎಸ್ ವೈಯೂ ಆಗಲ್ಲ! ಹಾಗಿದ್ದರೆ ಇನ್ಯಾರು?!

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ದೊಂಬರಾಟ ಜೋರಾಗಿದೆ. ಕಾಂಗ್ರೆಸ್-ಜೆಡಿಎಸ್ ಒಂದೆಡೆ, ಬಿಜೆಪಿ ಇನ್ನೊಂದೆಡೆ ...

news

ಇಂದು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೊದಲೇ ಹೇಳಿದ್ದ ಸುರೇಶ್ ಕುಮಾರ್!

ಬೆಂಗಳೂರು: ಇಂದು ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಬಿಎಸ್ ವೈ ಸಿಎಂ ಆಗಿ ...

news

ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಗೆ ಕೆಂಡದಂಥಾ ಕೋಪ ಬಂದಿದ್ದೇಕೆ?!

ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಕೆಪಿಜೆಪಿ ಪಕ್ಷದ ಶಾಸಕ ಶಂಕರ್ ಬೆಂಬಲ ಗಳಿಸಿದ್ದನ್ನು ಅಷ್ಟೇ ವೇಗವಾಗಿ ...

Widgets Magazine