ಯಶ್ ಮತದಾರರಿಗೆ ನೀಡಿದ ಸಲಹೆ ಏನು ಗೊತ್ತಾ…?

ಬೆಂಗಳೂರು, ಭಾನುವಾರ, 15 ಏಪ್ರಿಲ್ 2018 (12:58 IST)

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಮತದಾರರಿಗೆ ಸಲಹೆಯೊಂದನ್ನು ನೀಡಿದ್ದಾರೆ.


ಪತ್ರಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ‘ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ, ದೊಡ್ಡ ದೊಡ್ಡ ಸಮಾವೇಷ ಮಾಡುವುದು ಅಷ್ಟೆ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಫರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಅನ್ನೋದೆ ಗೊತ್ತಿರುವುದಿಲ್ಲ. ಇಂಥವರನ್ನ ಜನ ತಿರಸ್ಕರಿಸಬೇಕು. ಮತದಾನ ಅನ್ನೋ ಪವರ್ ಕಾರ್ಯವನ್ನು ಜನಸಾಮಾನ್ಯರು ಸಮರ್ಥ ವ್ಯಕ್ತಿಗೆ ಸಲ್ಲಿಸಬೇಕು. ಆಗಲೇ ಉತ್ತಮ ನಗರ, ಅತ್ಯುತ್ತಮ ನಾಡು, ಅದ್ಭುತ ದೇಶ ಕಟ್ಟಲು ಸಾಧ್ಯ’ ಎಂದಿದ್ದಾರೆ.


ಹಾಗೇ ‘ಎಲೆಕ್ಷನ್‍ನಲ್ಲಿ ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಟ್ಟು ಬಿಡುವುದಲ್ಲ. ಪ್ರತಿವಾರ, ಪ್ರತಿತಿಂಗಳು ಟಾರ್ಗೆಟ್ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲವೆಂದರೆ ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನ ಹಾಕ್ಕೊಂಡು ರುಬ್ಬಬೇಕು’ ಎಂದು ಯಶ್ ಅವರು ಮತದಾರರಿಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ವಿಧಾನಸಭಾ ಚುನಾವಣೆ ರಾಕಿಂಗ್ ಸ್ಟಾರ್ ಯಶ್ ರಾಜಕಾರಣಿಗಳು Bangalore Election Politicians Vidhana Sabha Rocking Star Yash

ಸುದ್ದಿಗಳು

news

ಸಿದ್ದರಾಮಯ್ಯ ಅವರು ಸೋಲುವ ಭಯದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ- ಹೆಚ್.ಡಿ.ಕುಮಾರಸ್ವಾಮಿ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ...

news

ದೆಹಲಿ ತಲುಪಿದ ಯಡಿಯೂರಪ್ಪ, ಇಂದು ರಾತ್ರಿ ಮತ್ತೊಂದು ಪಟ್ಟಿ ಪ್ರಕಟ!

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ರಾತ್ರಿಯೇ ...

news

ಚುನಾವಣೆಗೆ ಮೊದಲು ರಾಜ್ಯ ಕಾಂಗ್ರೆಸ್ ಗೆ ಬಿಗ್ ಶಾಕ್!

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಮೊದಲು ಕಾಂಗ್ರೆಸ್ ನಲ್ಲಿ ಆಂತರಿಕ ...

news

ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಸ್ವತಂತ್ರ ಸರ್ಕಾರ ಗ್ಯಾರಂಟಿ!

ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ...

Widgets Magazine