ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯ ಅರೆಸ್ಟ್

ಮೈಸೂರು, ಭಾನುವಾರ, 16 ಸೆಪ್ಟಂಬರ್ 2018 (06:56 IST)

ಮೈಸೂರು : ತಾನೇ ಜನ್ಮ ನೀಡಿದ ಮಗಳಿಗೆ ಕಳೆದ ಏಳು ವರ್ಷಗಳಿಂದ ನಿರಂತರವಾಗಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯಕೀಯ ಅಧೀಕ್ಷಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್(58) ಎಂಬುದಾಗಿ ತಿಳಿದುಬಂದಿದ್ದು, ಇತ ಉದಯಗಿರಿಯ ಜಿಲ್ಲೆಯ ಇ.ಎಸ್.ಐ.ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕನಾಗಿದ್ದ. ಇತ ಸ್ವಂತ ಮಗಳಿಗೇ ಕಳೆದ 7 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಲೈಂಗಿಕ ಕಿರುಕುಳಕ್ಕೆ ಅಡ್ಡಿಯಾದ ಪತ್ನಿ ತಬಸಮ್ ಮೇಲೆಯೂ ಹಲ್ಲೆ  ಮಾಡಿದ್ದಾನೆ ಎನ್ನಲಾಗಿದೆ. 


ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್​​​ನನ್ನ ಬಂಧಿಸಿದ ಪೊಲೀಸರು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಕಂಬಳಕ್ಕೆ ಮತ್ತೆ ಅಡ್ಡಿ?

ಬಹು ಪ್ರಸಿದ್ಧವಾಗಿರುವ ಕಂಬಳ ಹಾಗೂ ಇತರ ಪ್ರಾಣಿಗಳ ಗಾಡಿ ಸ್ಪರ್ಧೆಗಳಿಗೆ ನಿಷೇಧ ಹೇರಬೇಕು. ಹೀಗಂತ ...

news

ಕುಂದಾನಗರಿಗೆ ರಾಷ್ಟ್ರಪತಿ ಭೇಟಿ

ಕುಂದಾನಗರಿಗೆ ಬೆಳಗಾವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಭೇಟಿ ನೀಡಿದ್ದರು.

ನಕಲಿ ವಕೀಲನ ವಿರುದ್ಧ ವಕೀಲರ ದೂರು

ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ವಕೀಲರೇ ಪತ್ತೆ ಹಚ್ಚಿ, ...

news

ಅವರಪ್ಪನಿಂದಲೂ ನನ್ನ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿರುವ ಯತ್ನಕ್ಕೆ ಕಾಂಗ್ರೆಸ್ ಶಾಸಕ ತಿರುಗೇಟು ನೀಡಿದ್ದಾರೆ.

Widgets Magazine