ರಾಜ್ಯ ರಾಜಕಾರಣಕ್ಕೆ ಹೊಸ ಟ್ವಿಸ್ಟ್?!

ಬೆಂಗಳೂರು, ಬುಧವಾರ, 16 ಮೇ 2018 (09:53 IST)

ಬೆಂಗಳೂರು: ಪಿಕ್ಷರ್ ಅಬೀ ಬಾಕೀ ಹೈ! ಈ ಮಾತು ಸದ್ಯದ ರಾಜ್ಯ ರಾಜಕಾರಣಕ್ಕೆ ಅನ್ವಯಿಸುತ್ತದೆ. ಜೆಡಿಎಸ್ ಜತೆ ಕಾಂಗ್ರೆಸ್ ಸರ್ಕಾರ ರಚಿಸುವುದು ಬಹುತೇಕ ಪಕ್ಕಾ ಆಗುತ್ತಿರುವ ಬೆನ್ನಲ್ಲೇ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಎಚ್ ಡಿಕೆ ಭೇಟಿ ಮತ್ತಷ್ಟು ಕುತೂಹಲ ಮೂಡಿಸಿದೆ.
 
ನಿನ್ನೆಯಷ್ಟೇ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಇಂದು ಬೆಳ್ಳಂ ಬೆಳಿಗ್ಗೆಯೇ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಎಚ್ ಡಿಕೆ ತಂಗಿದ್ದ ಹೋಟೆಲ್ ಗೆ ಭೇಟಿ ನೀಡಿದ್ದಾರೆ.
 
ಎಚ್‍ ಡಿಕೆ ಭೇಠಿಯಾಗಿ ಕೆಲವು ಸಮಯಗಳ ಕಾಲ ಮಾತುಕತೆ ನಡೆಸಿದ ಪ್ರಕಾಶ್ ಜಾವೇಡ್ಕರ್ ಬಳಿಕ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ಕೋರಿರಬಹುದು ಎನ್ನಲಾಗಿದೆ. ಆದರೆ ಮಾತುಕತೆ ಬಳಿಕ ಹೋಟೆಲ್ ನಿಂದ ಹೊರಬಂದ ಪ್ರಕಾಶ್ ಜಾವೇಡ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರ ನಡೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಚುನಾವಣೆ ರಾಜ್ಯ ಸುದ್ದಿಗಳು Congress Bjp Jds Hd Kumaraswamy Karnataka Election State News

ಸುದ್ದಿಗಳು

news

ಕೆಪಿಸಿಸಿ ಸಂಪರ್ಕಕ್ಕೆ ಸಿಗದ ನಾಲ್ವರು ಶಾಸಕರು! ಬಿಜೆಪಿಗೆ ನಾಲ್ವರು ಶಾಸಕರ ಬೆಂಬಲ?

ಬೆಂಗಳೂರು: ಅತ್ತ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಲು ಕಸರತ್ತು ...

news

ಬಿಜೆಪಿಯವರು ಯಾರಿಗೆಲ್ಲಾ ಕರೆ ಮಾಡಿದ್ರು ಪಟ್ಟಿ ಕೊಡ್ತೇನೆ: ಡಿಕೆಶಿ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಪರಿಸ್ಥಿತಿ ಬಂದ ಬಳಿಕ ಸರ್ಕಾರ ರಚಿಸಲು ಕಾಂಗ್ರೆಸ್ ಬಿಜೆಪಿ, ...

news

ಅಶೋಕ ಹೋಟೆಲ್ ನ 523 ನೇ ನಂಬರ್ ಕೊಠಡಿಯಲ್ಲಿ ನಡೆಯಿತು ಆ ಮಾತುಕತೆ!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಮತ್ತು ಮೂರನೇ ಸ್ಥಾನಕ್ಕೆ ...

news

ಬಹುಮತ ಬಾರದಿದ್ದರೂ ಕೊನೆಯ ಕ್ಷಣದಲ್ಲಿ ಕೆಲಸ ಮಾಡಿದ ಮೋದಿ, ಅಮಿತ್ ಶಾ ಮ್ಯಾಜಿಕ್

ಬೆಂಗಳೂರು: ರಾಜ್ಯದ ಬಿಜೆಪಿ ನಾಯಕರ ಶ್ರಮ ನೋಡಿದರೆ ಈ ಬಾರಿ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ...

Widgets Magazine