ಕುದುರೆ ವ್ಯಾಪಾರ: ಬಿಜೆಪಿ ಹುಟ್ಟು ಗುಣ ಸುಟ್ಟರೂ ಹೋಗದು ಎಂದ ರಾಮಲಿಂಗಾರೆಡ್ಜಿ

ರಾಮನಗರ, ಶುಕ್ರವಾರ, 18 ಮೇ 2018 (15:43 IST)

ಬಿಜೆಪಿಯವರು ನಮ್ಮ ಶಾಸಕರಿಗೆ ತುಂಬಾ ಆಫರ್ ಕೊಟ್ಟಿದ್ದಲ್ಲದೇ ಹಾರ್ಸ್ ಟ್ರೇಡಿಂಗ್ ಮಾಡಲು ತುಂಬಾ ಪ್ರಯತ್ನ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ನಮಗೆ ಏನು ರಕ್ಷಣೆ ಬೇಕಾಗಿಲ್ಲ. ನಮಗೆ ರಕ್ಷಣೆ ಕೊಡಿ ಅಂತಾ ಕೇಳಿರಲಿಲ್ಲ. ಇವರು ಇದೇ ರೀತಿ ಮುಂದುವರೆದರೆ ರಾಜ್ಯದ ಗತಿ ಏನು ರಾಮನಗರ ಎಸ್.ಪಿ.ಯನ್ನು ವರ್ಗಾವಣೆ ಮಾಡಿದ್ದಾರೆ. ಅವರ ಕಾರ್ಯವೈಖರಿಯನ್ನು ಇವತ್ತು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ನಾವು ಆದಷ್ಟು ಬೇಗ ನಮ್ಮ ಸಮಿಶ್ರ ಸರ್ಕಾರವನ್ನು ರಚನೆ ಮಾಡ್ತೇವೆ. ಈ ಹಿಂದೆ ಹಸಿರು ಶಾಲು ಹಾಕಿಕೊಂಡು ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಅವರು ಇವತ್ತು ಕೂಡ ಪ್ರಮಾಣ ವಚನವನ್ನ ಸ್ವೀಕಾರ ಮಾಡಿದ್ದಾರೆ ಅಂದು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮಿಷನ್ ಇಲ್ಲಾ ಎಂದಿದ್ದರು ಎಂದು ಲೇವಡಿ ಮಾಡಿದ್ದಾರೆ.
 
ಅವರಿಗೆ ಹುಟ್ಟ ಗುಣ ಸುಟ್ಟರು ಹೋಗಲ್ಲಾ ಅಂತಾರಲ್ಲಾ, ಅದೇ ರೀತಿ ಬಿಜೆಪಿಯವರ ಗುಣ. ನಮ್ಮ ಶಾಸಕರಿಗೆ ಕೋಟಿ ಕೋಟಿ ಹಣ ಕೊಡ್ತೇವೆ. ಮಂತ್ರಿ ಮಾಡ್ತಾವೆ ಅಂದಿದ್ದಾರೆ. ಬಿಜೆಪಿಯವರು ಈ ಚೇಷ್ಟೆಗಳನ್ನ ಬಿಡಬೇಕು ಯಡಿಯೂರಪ್ಪ ಎಷ್ಟು ಆತುರವಾಗಿ ಸರ್ಕಾರ ರಚನೆ ಮಾಡಿದ್ದಾರೋ ಅಷ್ಟೇ ಬೇಗ ಮನೆಗೆ ಹೋಗ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಳೆಯೇ ಯಡಿಯೂರಪ್ಪ ಸರ್ಕಾರದ ವಿಶ್ವಾಸ ಮತ: ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಾಳೆ ...

news

ನೀವೂ ಬಹುಮತ ಇದೆ ಅಂತೀರಿ, ಅವರೂ ಅಂತಾರೆ! ಇದು ಹೇಗೆ ಸಾಧ್ಯ? ಬಿಜೆಪಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ಕರ್ನಾಟಕ ರಾಜ್ಯ ಸರ್ಕಾರ ರಚನೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ...

news

ಸುಪ್ರೀಂಕೋರ್ಟ್ ನಲ್ಲಿ ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ ಕರ್ನಾಟಕದ ಬಿಜೆಪಿ ಸರ್ಕಾರದ ಭವಿಷ್ಯ!

ನವದೆಹಲಿ: ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದನ್ನು ಪ್ರಶ್ನಿಸಿ ...

news

ಜೆಡಿಎಸ್ ಶಾಸಕರಿಗೆ ಜತೆಯಾಗದ ಎಚ್ ಡಿಕೆ, ಪುತ್ರ ನಿಖಿಲ್

ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ...

Widgets Magazine
Widgets Magazine