ಬಿಜೆಪಿ ಸರ್ಕಾರಗಳನ್ನು ಹಲವು ಬಾರಿ ಉರುಳಿಸಿದ ಕಾಂಗ್ರೆಸ್ ನಿಂದ ನಮಗೆ ನೈತಿಕ ಪಾಠ ಬೇಕಿಲ್ಲ: ರವಿಶಂಕರ್ ಪ್ರಸಾದ್

ನವದೆಹಲಿ, ಗುರುವಾರ, 17 ಮೇ 2018 (08:54 IST)

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿರುವ ಬಗ್ಗೆ ಕಾಂಗ್ರೆಸ್ ಏಟಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
 
ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ಹಲವು ಬಿಜೆಪಿ ಸರ್ಕಾರಗಳನ್ನು ಕಾಂಗ್ರೆಸ್ ಉರುಳಿಸಿದೆ. ಈಗ ಅದೇ ಕಾಂಗ್ರೆಸ್ ನಮಗೆ ನೈತಿಕತೆಯ ಪಾಠ ಮಾಡುತ್ತಿದೆ ಎಂದು ರವಿಶಂಕರ್ ಪ್ರಸಾದ್ ಲೇವಡಿ ಮಾಡಿದ್ದಾರೆ.
 
ಇನ್ನು, ಕರ್ನಾಟಕದಲ್ಲಿ ರಾಜ್ಯಪಾಲರು ಕಾನೂನಿನ ಚೌಕಟ್ಟಿನಲ್ಲೇ ಈ ನಿರ್ಧಾರ ಮಾಡಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅದಕ್ಕೆ ಸುಪ್ರೀಂಕೋರ್ಟ್ ನ ತೀರ್ಪಿನ ಪ್ರತಿಯನ್ನೂ ಪತ್ರಿಕಾಗೋಷ್ಠಿಯಲ್ಲಿ ಓದಿದ್ದಾರೆ. ಬಹುದೊಡ್ಡ ಪಕ್ಷಕ್ಕೆ ಮೊದಲ ಅವಕಾಶ ನೀಡಬೇಕು ಎಂಬ ನಿಯಮದಂತೆ ಬಿಜೆಪಿಗೆ ಅವಕಾಶ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಶಾಸಕರು ಈಗ ಎಲ್ಲಿದ್ದಾರೆ?

ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಯಾರ ಕೈಗೂ ಸಿಗದಂತೆ ಕಾಂಗ್ರೆಸ್ ಶಾಸಕರು ರೆಸಾರ್ಟ್ ...

news

ರಾಜ್ಯಪಾಲರ ವಿರುದ್ಧವೇ ಕಾನೂನು ಸಮರಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಜೆಡಿಎಸ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡರೂ ಇದುವರೆಗೆ ...

news

ನನ್ನನ್ನು ಖರೀದಿಸುವವರು ಇನ್ನೂ ಹುಟ್ಟಿಲ್ಲ: ಕುಮಾರಸ್ವಾಮಿ ಖಡಕ್ ನುಡಿ

ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬಾರದು. ಹಾಗೆ ಮಾಡಿದರೆ ಶಾಸಕರ ...

news

ಎಚ್ ಡಿಕೆಯೂ ಸಿಎಂ ಆಗಲ್ಲ, ಬಿಎಸ್ ವೈಯೂ ಆಗಲ್ಲ! ಹಾಗಿದ್ದರೆ ಇನ್ಯಾರು?!

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ದೊಂಬರಾಟ ಜೋರಾಗಿದೆ. ಕಾಂಗ್ರೆಸ್-ಜೆಡಿಎಸ್ ಒಂದೆಡೆ, ಬಿಜೆಪಿ ಇನ್ನೊಂದೆಡೆ ...

Widgets Magazine
Widgets Magazine