ನೀವೂ ಬಹುಮತ ಇದೆ ಅಂತೀರಿ, ಅವರೂ ಅಂತಾರೆ! ಇದು ಹೇಗೆ ಸಾಧ್ಯ? ಬಿಜೆಪಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ, ಶುಕ್ರವಾರ, 18 ಮೇ 2018 (11:02 IST)

ನವದೆಹಲಿ: ಕರ್ನಾಟಕ ರಾಜ್ಯ ಸರ್ಕಾರ ರಚನೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ರಿಟ್ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ.
 
ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಈ ವೇಳೆ ನಮಗೆ ಬಹುಮತವಿದೆ. ಆದರೆ ಬೆಂಬಲ ನೀಡುತ್ತಿರುವ ಶಾಸಕರಿಗೆ ಬೆದರಿಕೆ ಇರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.
 
ಇದಕ್ಕೆ ನ್ಯಾಯಾಧೀಶರು ಕಾಂಗ್ರೆಸ್ ಕೂಡಾ ನಮಗೆ ಬಹುಮತ ಇದೆ ಅಂತಿದೆ. ನೀವೂ ಅಂತಿದ್ದೀರಿ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಕೋರ್ಟ್ ಗೆ ಬಿಜೆಪಿ ಪರವಾಗಿ ವಕೀಲ ರೋಹ್ಟಗಿ ಶಾಸಕರ ಹೆಸರೇ ಇಲ್ಲದ ಪತ್ರ ಸಲ್ಲಿಸಿ ಶಾಸಕರ ಹೆಸರು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
 
ಅತ್ತ ಕಾಂಗ್ರೆಸ್ ಕೂಡಾ ತನ್ನ ಶಾಸಕರ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದು, ಅದರಲ್ಲಿ ಶಾಸಕ ಆನಂದ್ ಸಿಂಗ್ ಸಹಿ ಇರಲಿಲ್ಲ. ಈ ನಡುವೆ ಅತೀ ದೊಡ್ಡ ಪಕ್ಷ ಹೇಗೆ ಸ್ಥಿರ ಸರ್ಕಾರ ನೀಡುತ್ತೆ ಎಂಬ ನಿರ್ಧಾರಕ್ಕೆ ಬಂದರು ಎಂದು ಬಿಜೆಪಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ವಾದ ಮಂಡಿಸಿದ ರೋಹ್ಟಗಿ ಇದು ರಾಜ್ಯಪಾಲರ ಪರಮಾಧಿಕಾರ ಎಂದಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್-ಜೆಡಿಎಸ್ ಶಾಸಕರು ಲಿಖಿತ ಬೆಂಬಲ ನೀಡಿಲ್ಲ ಎಂದೂ ಅವರು ವಾದಿಸಿದ್ದಾರೆ.  ಹೀಗಾಗಿ ಇದು ಖಂಡಿತವಾಗಿ ನಂಬರ್ ಗೇಮ್ ಎಂಬ ತೀರ್ಮಾನಕ್ಕೆ ನ್ಯಾಯಾಧೀಶರು ಬಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಪ್ರೀಂಕೋರ್ಟ್ ನಲ್ಲಿ ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ ಕರ್ನಾಟಕದ ಬಿಜೆಪಿ ಸರ್ಕಾರದ ಭವಿಷ್ಯ!

ನವದೆಹಲಿ: ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದನ್ನು ಪ್ರಶ್ನಿಸಿ ...

news

ಜೆಡಿಎಸ್ ಶಾಸಕರಿಗೆ ಜತೆಯಾಗದ ಎಚ್ ಡಿಕೆ, ಪುತ್ರ ನಿಖಿಲ್

ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ...

news

ಪಾರ್ಕ್ ಹಯಾತ್ ಹೋಟೆಲ್ ನಿಂದಲೂ ಶಾಸಕರು ಶಿಫ್ಟ್!

ಹೈದರಾಬಾದ್: ಆಪರೇಷನ್ ಕಮಲಕ್ಕೆ ಸಿಲುಕದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ದೂರದ ಹೈದರಾಬಾದ್ ಗೆ ...

news

ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಲು ಕಾರ್ಯಕರ್ತರಿಗೆ ಕುಮಾರಸ್ವಾಮಿ ಆರ್ಡರ್

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬಹುಮತವಿದ್ದರೂ ಮೈತ್ರಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡದೇ ...

Widgets Magazine
Widgets Magazine