ಲೇಖನ | ವರ್ಷ ಭವಿಷ್ಯ | ಟ್ಯಾರೋ ಭವಿಷ್ಯ | ಜಾತಕ ಹೊಂದುತ್ತದೆಯೇ | ದಿನ ಭವಿಷ್ಯ | ವಾರ ಭವಿಷ್ಯ | ಮಾಸ ಭವಿಷ್ಯ | ತಾರಾ ಭವಿಷ್ಯ | ನಿಮ್ಮ ಜಾತಕ
ಮುಖ್ಯ ಪುಟ ಜ್ಯೋತಿಷ್ಯ » ಜ್ಯೋತಿಷ್ಯಶಾಸ್ತ್ರ » ತಾರಾ ಭವಿಷ್ಯ » ಅಭಿಷೇಕ್‌ಗೆ ಪತ್ನಿ ಐಶ್‌ನಿಂದ ಪ್ರೀತಿಯ ಕಾರಂಜಿ (Abhishek Bachchan | Aishwarya Rai | Celebrity Prediction)
ತಾರಾ ಭವಿಷ್ಯ
Feedback Print Bookmark and Share
 
IFM
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಹುಟ್ಟಿದ ನಕ್ಷತ್ರ ಉತ್ತರಾಭಾದ್ರ. ಈ ನಕ್ಷತ್ರದಲ್ಲಿ ಹುಟ್ಟಿದ್ದರಿಂದ ಅರ ಜೀವನ ಸುಖೀ ಹಾಗೂ ಸಂಪನ್ನ ಎಂಬುದರಲ್ಲಿ ಸಂಶಯವಿಲ್ಲ. ಅಭಿಷೇಕ್ ಪತ್ನಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹುಟ್ಟಿದ್ದು ಪೂರ್ವಷಾಡಾ ನಕ್ಷತ್ರದಲ್ಲಿ. ಈ ನಕ್ಷತ್ರದಲ್ಲಿ ಹುಟ್ಟಿದ ಮಂದಿ ಖಂಡಿತ ಮಾನ ಸನ್ಮಾನಗಳಿಗೆ ಪಾತ್ರರಾಗುತ್ತಾರೆ. ನಕ್ಷತ್ರಗಳ ಪ್ರಭಾವವನ್ನು ಈ ಇಬ್ಬರು ಕಲಾಕರರಲ್ಲೂ ಈಗ ಕಾಣಬಹುದು.

ಅದರಲ್ಲೂ ಅಭಿಷೇಕ್- ಐಶ್ವರ್ಯಾರ ವೈವಾಹಿಕ ಸಂಬಂಧ ಹೇಗಿರುತ್ತದೆ ಎಂಬ ಕುತೂಹಲ ಸಹಜವೇ. ಜತೆಗೆ ಈ ಬಗ್ಗೆ ಹಲವು ಜಿಜ್ಞಾಸೆಗಳೂ, ತರ್ಕಗಳೂ ಇವೆ. ಯಾಕೆಂದರೆ, ಐಶ್ವರ್ಯಾರ ಕುಂಡಲಿಯಲ್ಲಿ ಮಂಗಳನಿದ್ದಾನೆ. ಆದರೆ, ಅಭಿಷೇಕ್‌ರ ಕುಂಡಲಿಯಲ್ಲಿ ಇಲ್ಲ. ಕುಂಡಲಿಯಲ್ಲಿ ಮಂಗಳ ಯಾವುದೇ ಭಾವದಲ್ಲಿ ಮೇಷ, ಸಿಂಹದಲ್ಲಿ ಕುಳಿತಿದ್ದರೆ ತೊಂದರೆಯಿಲ್ಲ. ಐಶ್ವರ್ಯಾರ ಕುಂಡಲಿಯಲ್ಲಿ ಮಂಗಳನಿರುವುದು ಮೇಷದಲ್ಲಿ. ಸ್ವಯಂರಾಶಿಯಲ್ಲಿ ಮಂಗಳ ವಿರಾಜಮಾನನಾಗಿರುವುದಿಂದ ಮಂಗಳಕಾರಕನೇ ಆಗಿರುತ್ತಾನೆ. ಹಾಗಾಗಿ ಐಶ್ವರ್ಯಾರಿಗೆ ವೈವಾಹಿಕ ಜೀವನದಲ್ಲಿ ತೊಂದರೆ ಬಂದರೂ, ವಿಘ್ನಗಳು ಎದುರಾದರೂ, ಮಂಗಳ ವಿಘ್ನಗಳನ್ನು ಉಪಾಯದಿಂದ ದೂರಮಾಡುತ್ತಾನೆ.

ಅಭಿಷೇಕ್‌ರ ಜನ್ಮ ಶನಿಯ ಮಹಾದಶೆಯಲ್ಲಿ ಆಗಿದೆ. ಇದರ ಭೋಗ್ಯ ಕಾಲ 1 ವರ್ಷ 12 ಮಾಹೆ ಐದು ದಿನಗಳ ಕಾಲ ಇರುತ್ತದೆ. ಐಶ್ವರ್ಯಾರ ಜನ್ಮ ಶುಕ್ರನ ಮಹಾದಶೆಯಲ್ಲಿ ಆಗಿದ್ದು ಇದರ ಭಓಗ್ಯ ಕಾಲ 9 ವರ್ಷ, ಮೂರು ಮಾಹೆ ಏಳು ದಿನಗಳು ಇರುತ್ತದೆ. ಅಭಿಷೇಕ್‌ರ ಜನ್ಮ ಸಮಯದಲ್ಲಿ ಸೂರ್ಯ ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದುದರಿಂದ ಅಂತಹ ವ್ಯಕ್ತಿ ಲೋಭಿಯಾಗುತ್ತಾನೆ.

ಅಭಿಷೇಕ್‌ರ ಕುಂಡಲಿಯಲ್ಲಿ ಚಂದ್ರ ದ್ವಿತೀಯ ಭಾವದಲ್ಲಿರುವುದರಿಂದ ಪರಿವಾರದಲ್ಲಿ ಸುಖ ಹಾಗೂ ಪತ್ನಿಯಿಂದ ವಿಶೇಷ ಪ್ರೀತಿ ದಕ್ಕುತ್ತದೆ. ಮೀನದಲ್ಲಿ ಚಂದ್ರನಿದ್ದಂತಹ ಜಾತಕವುಳ್ಳವನು ಕವಿ, ಕಲಾಕಾರ, ಝನವಂತನಾಗುತ್ತಾನೆ. ಇದೇ ಕಾರಣದಿಂದ ಅಭಿಷೇಕ್ ಧನವಂತ ಹಾಗೂ ಕಲಾಕಾರರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾರಾ ಭವಿಷ್ಯ, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಬಾಲಿವುಡ್