ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಂದಿರನ್ ಗಳಿಕೆ 117 ಕೋಟಿ: ಭಾರತೀಯ ಚಿತ್ರರಂಗದಲ್ಲೇ ದಾಖಲೆ! (Endhiran | Robot | Rajanikanth | Aishwarya Rai)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಬಿಡುಗಡೆಗೂ ಮುನ್ನ ಭಾರೀ ಸುದ್ದಿ ಮಾಡಿದ್ದ ಸೂಪರ್ ಸ್ಟಾರ್ ರಜನೀಕಾಂತ್, ಐಶ್ವರ್ಯಾ ರೈ ಅಭಿನಯದ 'ಎಂದಿರನ್' ಬಿಡುಗಡೆಯ ನಂತರವೂ ಅಂಥದ್ದೇ ಭಾರೀ ಸುದ್ದಿ ಮಾಡುತ್ತಿರುವುದು ವಿಶೇಷ. ಇದೀಗ ಕೇವಲ ಏಳೇ ದಿನಗಳ ಕಲೆಕ್ಷನ್ 117 ಕೋಟಿ ರೂಪಾಯಿಗಳನ್ನು ತಲುಪಿದೆ. ಆ ಮೂಲಕ ತ್ರಿ ಈಡಿಯಟ್ಸ್‌ನ್ನು ಇತ್ತೀಚೆಗೆ ಹಿಂದೆ ಹಾಕಿ ಮುನ್ನುಗ್ಗಿದ್ದ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ದಾಖಲೆಯನ್ನೂ ಕೂಡಾ ಎಂದಿರನ್ ಅಳಿಸಿಹಾಕಿದೆ. ಜೊತೆಗೆ ಈವರೆಗೆ ಭಾರತೀಯ ಚಿತ್ರರಂಗದಲ್ಲಿ ಮೊದಲ ಏಳು ದಿನಗಳಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರವಾಗಿ ಎಂದಿರನ್ ಹೊರಹೊಮ್ಮಿದೆ.

ಕೇವಲ ತಮಿಳುನಾಡೊಂದರಲ್ಲೇ ಒಂದು ವಾರದಲ್ಲಿ ಎಂದಿರನ್ ಗಳಿಕೆ 60 ಕೋಟಿ ರೂಪಾಯಿಗಳಿಗೇರಿದೆ! ಆಂಧ್ರಪ್ರದೇಶದಲ್ಲಿ 30 ಕೋಟಿ ರೂಪಾಯಿಗಳಾದರೆ, ಕರ್ನಾಟಕದಲ್ಲಿ ಇದು ಎಂಟು ಕೋಟಿ ತಲುಪಿದೆ. ಇನ್ನುಳಿದಂತೆ ಕೇರಳದಲ್ಲಿ ನಾಲ್ಕು ಕೋಟಿ ರೂಪಾಯಿ ಗಳಿಸಿದ್ದು, ಹಿಂದಿ ಅವತರಣಿಕೆ ರೋಬೋಟ್ 15 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ವಾರದಲ್ಲಿ 82 ಕೋಟಿ ಗಳಿಸುವ ಮೂಲಕ ಅಮೀರ್ ಖಾನ್ ಚಿತ್ರ ತ್ರಿ ಈಡಿಯಟ್ಸ್ ಮಾಡಿದ್ದ ಗಳಿಕೆಯ ಸಾಧನೆಯನ್ನು ಸರಿಗಟ್ಟಿತ್ತು. ಆದರೆ ಇದೀಗ ಎಂದಿರನ್ ದಬಾಂಗನ್ನೂ ಹಿಮ್ಮೆಟ್ಟಿಸಿದೆ.

ಹಾಗೆ ನೋಡಿದರೆ ಎಂದಿರನ್/ ರೋಬೋಟ್ 2,200 ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ದಬಾಂಗ್ 1,400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈಗಾಗಲೇ ಭರ್ಜರಿ ಗಳಿಸಿದ ಎಂದಿರನ್ ಇನ್ನೂ ಕೂಡಾ ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರುಕಟ್ಟೆ ಪಂಡಿತರ ಪ್ರಕಾರ ಎಂದಿರನ್ 200 ಕೋಟಿಯನ್ನು ಸುಲಭವಾಗಿ ಗಳಿಸಿ ಮುನ್ನುಗ್ಗಲಿದ್ದು, 260 ಕೋಟಿಗೂ ಮೀರಿ ಕಲೆಕ್ಷನ್ ಗಳಿಸಬಹುದು.

ಹಿಂದಿಯಲ್ಲೂ ಎಂದಿರನ್ ಸಾಧನೆ ಕಮ್ಮಿಯೇನಿಲ್ಲ. ರೋಬೋಟ್ ಚಿತ್ರ ಎಂದಿರನ್‌ನ ಡಬ್ಬಿಂಗ್ ಅವತರಣಿಕೆಯಾದರೂ, ಭಾರತೀಯ ಚಿತ್ರರಂಗದಲ್ಲೇ ಡಬ್ಬಿಂಗ್ ಚಿತ್ರ ಮಾಡದ ಸಾಧನೆಯೊಂದನ್ನು ರೋಬೋಟ್ ಮಾಡಿದೆ. ಡಬ್ಬಿಂಗ್ ಅವತರಣಿಕೆಯ ರೋಬೋಟ್ ವಾರದಲ್ಲಿ 30 ಕೋಟಿ ಗಳಿಸಿದ್ದು, ಇಂತಹ ಸಾಧನೆಯ್ನನು ಈವರೆಗೆ ಯಾವೊಂದು ಡಬ್ಬಿಂಗ್ ಚಿತ್ರವೂ ಮಾಡಿಲ್ಲ. ಅಷ್ಟೇಕೆ, ಡಬ್ಬಿಂಗ್ ಚಿತ್ರವೊಂದು ವಾರವೊಂದರಲ್ಲಿ ಒಂದು ಕೋಟಿ ರೂ ಗಳಿಸಿದ ಸಾಧನೆಯನ್ನೂ ಬಹುಶಃ ಈವರೆಗೆ ಮಾಡಿಲ್ಲ. ಅಂಥಾದ್ದರಲ್ಲಿ, ರಜನಿ ಮಹಾತ್ಮೆ ಸಾಧನೆಯಲ್ಲದೆ ಮತ್ತಿನ್ನೇನು?!

ಎಂದಿರನ್ ಚಿತ್ರ ವಿಮರ್ಶೆಗಾಗಿ ಇಲ್ಲಿ ಕ್ಲಿಕ್ ಮಾಡಿ...

ಇನ್ನಷ್ಟು ಫೋಟೋಗಳಿಗೆ ಮುಂದೆ ಕ್ಲಿಕ್ ಮಾಡಿ....

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಂದಿರನ್, ರೋಬೋಟ್, ರಜನೀಕಾಂತ್, ಐಶ್ವರ್ಯಾ ರೈ