ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿನಾಯಕ ಗೆಳೆಯರ ಬಳಗ'ದ ಎರಡು ವರ್ಷ ತಪಸ್ಸು ಸಾರ್ಥಕ! (Vinayaka Geleyara Balaga | Vijaya Raghavendra | Meghana Gaunkar | Nagendra Prasad)
EVENT
ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ 'ವಿನಾಯಕ ಗೆಳೆಯರ ಬಳಗ' ಚಿತ್ರ ಸುದೀರ್ಘ ಅಂತರದ ನಂತರ ಬಿಡುಗಡೆಯಾಗಲು ಮುಂದಾದಾಗ ಈ ಚಿತ್ರದ ಯಶಸ್ಸಿನ ಕುರಿತು ಸಂದೇಹಿಸಿದವರೇ ಹೆಚ್ಚು. ಆದರೆ ಚಿತ್ರದ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮ‌ೂಲಕ ಹಾಗೂ ಹಾಡುಗಳು ವಾಹಿನಿಗಳಲ್ಲಿ ಪದೇಪದೇ ಪ್ರಸಾರವಾಗುವಂತೆ ವ್ಯವಸ್ಥೆಗೊಳಿಸುವ ಮ‌ೂಲಕ ಚಿತ್ರವನ್ನು ದಡ ಮುಟ್ಟಿಸುವಲ್ಲಿ ಚಿತ್ರತಂಡವು ಯಶಸ್ವಿಯಾಗಿದೆ ಎನ್ನಬಹುದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

1985ರ ಕಾಲಾವಧಿಯ ಚಿತ್ರಣವನ್ನು ಕಟ್ಟಿಕೊಡುವ ಚಿತ್ರ ಎಂದೇ ಬಿಂಬಿಸಲಾಗಿದ್ದ ಈ ಚಿತ್ರಕ್ಕೆ ಅದೊಂದೇ ಅಂಶವು ಸಾಕಾಗಲಾರದು ಎಂಬ ಅರಿವು ಚಿತ್ರತಂಡಕ್ಕಿತ್ತು. ಹೀಗಾಗಿ ರಾಜ್ಯಾದ್ಯಂತ ಸ್ವತಃ ಪ್ರಚಾರಕ್ಕಿಳಿಯಲು ನಿರ್ಧರಿಸಿದ ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ್‌ರವರ ಬಳಗವು ಸಂಗೀತಬ್ರಹ್ಮ ಹಂಸಲೇಖಾರನ್ನು ಸನ್ಮಾನಿಸುವ ಮ‌ೂಲಕ ತನ್ನ ಉದ್ದೇಶಕ್ಕೆ ಓಂಕಾರವನ್ನು ಹಾಡಿತು.

ಶಾಲಾ-ಕಾಲೇಜುಗಳಲ್ಲಿ ಇಟ್ಟುಕೊಂಡ ಚಿತ್ರಸಂಬಂಧಿ ಸಂವಾದ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಫಲ ನೀಡಿದವು. ನಟ ವಿಜಯ ರಾಘವೇಂದ್ರ, ನಟಿ ಮೇಘನಾ ಗಾಂವ್ಕರ್ ಸೇರಿದಂತೆ ತಂಡದ ಬಹುತೇಕ ಸದಸ್ಯರು ಪ್ರಾಮಾಣಿಕವಾಗಿ ಪ್ರಚಾರಕ್ಕಿಳಿದಿದ್ದು ಒಂದು ಪ್ರಯೋಜಕ ಅಂಶವಾಗಿ ಕಂಡುಬಂತು.

ಜೊತೆಗೆ ಹರಿಕೃಷ್ಣರ ಕ್ಯಾಚಿ ಟ್ಯೂನುಗಳೂ ಚಿತ್ರದ ಯಶಸ್ಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ ಎಂದು ಹೇಳಬಹುದು. ಬೆಂಗಳೂರು, ಹಾಸನ ವಲಯದಲ್ಲಿ ಚಿತ್ರದ ಗಳಿಕೆ ಚೆನ್ನಾಗಿದೆಯಂತೆ. ರಾಜ್ಯದ ಕೆಲಭಾಗಗಳಲ್ಲಿ ಮಳೆ ಆರಂಭವಾಗಿರುವುದರಿಂದ ಅಲ್ಲಿ ಗಳಿಕೆ ಇನ್ನೂ ಸುಧಾರಿಸಬೇಕಿದೆ ಎಂಬುದು ಚಿತ್ರದ ನಿರ್ಮಾಪಕ-ನಿರ್ದೇಶಕ ನಾಗೇಂದ್ರ ಪ್ರಸಾದ್‌ರವರ ಅಭಿಪ್ರಾಯ.

ಒಟ್ಟಿನಲ್ಲಿ ನಿರಂತರ 2 ವರ್ಷಗಳ ತಪಸ್ಸು ಈಗ ಫಲ ನೀಡಿದೆ ಎಂದುಕೊಳ್ಳಬಹುದಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ