ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ರಮೇಶ್ ಅರವಿಂದ್‌ಗೆ 47 ವರ್ಷ, ಬರ್ತ್‌ಡೇ ವಿಶ್ ಮಾಡಿ (Ramesh Aravind | Latest Kannada Movie News | Kannada Film News | Kannada Actress)
EVENT
'ಸುಂದರ ಸ್ವಪ್ನಗಳು' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ರಮೇಶ್ ಅರವಿಂದ್ ಅವರಿಗಿಂದು (ಸೆಪ್ಟೆಂಬರ್ 10) ಜನುಮದಿನ. ರಮೇಶ್ ನೂರು ಜನ್ಮಕೂ... ನೂರಾರು ಜನ್ಮಕೂ ಹೀಗೆ ಚಿತ್ರರಂಗದಲ್ಲಿ ಮೆರೆಯಲಿ ಎಂದು ವೆಬ್ ದುನಿಯಾ ಹಾರೈಸುತ್ತಿದೆ. ನೀವೂ ಹಾರೈಸಿ....

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಂತಹಾ ಪಾತ್ರಗಳನ್ನು ಕೊಟ್ಟರೂ ಅದಕ್ಕೆ ಜೀವ ತುಂಬಿಸುವಂತಾ ಪ್ರತಿಭೆ ನಟ ರಮೇಶ್ ಅವರದು. ನಗು ನಗುತ್ತಾ ನಟಿಸುವ ರಮೇಶ್ ಹಾಗೆಯೇ ನಗುವಿನಲ್ಲೇ ಅಳುವಂತಹ, ಬೇಸರಿಸುವ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.

ಒಂದೇ ಕೆಮೆರಾ ಶಾಟ್‌ನಲ್ಲೇ ಎರಡೂ ಹಾವ ಭಾವವನ್ನು ಸೃಷ್ಟಿಸುವಂತಾ ಅದ್ಭುತ ನಟನಾ ಕಲೆಯನ್ನು ಅವರು ತನ್ನಿಂತಾನೇ ರೂಪಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವ ಮುಂಚಿನಿಂದಲೂ ಕಮಲ್ ಹಾಸನ್ ಜತೆ ನಟಿಸಬೇಕೆಂಬ ದೊಡ್ಡ ಕನಸನ್ನು ಹೊತ್ತಿದ್ದ ರಮೇಶ್‌ಗೆ ಇಂದಿಗೂ ಕಮಲ್ ಎಂದರೆ ಅಚ್ಚುಮೆಚ್ಚು.

ಹಾಗೇಯೇ ನಟನೆ, ಚಿತ್ರಗಳ ಆಯ್ಕೆಯಲ್ಲೂ ಕಮಲ್ ಅವರ ಅಭಿರುಚಿಯನ್ನೇ ಹೋಲುವಂತಿರುವ ಇವರಿಗೆ ಅಮೆರಿಕ ಅಮೆರಿಕ, ಅಮೃತ ವರ್ಷಿಣಿ, ಓ ಮಲ್ಲಿಗೆ ಮುಂತಾದ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಮಲಯಾಳಂ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ನಟಿಸಿರುವ ಇವರಿಗೆ ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ವಿಭಿನ್ನ ಅಭಿಮಾನಿ ವರ್ಗಗಳಿವೆ.

ಇದೀಗ ಗಂಭೀರ ಪಾತ್ರಗಳನ್ನು ಬಿಟ್ಟು ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿರುವ ಇವರು ಹೆಚ್ಚು ಚಿಂತನೆ ನಡೆಸಿ ಈ ನಿರ್ಧಾರಕ್ಕೆ ಬಂದಿರುವಂತಿದೆ. ಹೀಗೇ ಸದಾ ಎಲ್ಲರನ್ನೂ ನಗುನಗಿಸುತ್ತಾ ಅವರೂ ನಗುತ್ತಾ ಬಾಳಲೆಂದು ಹಾರೈಸಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ