ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ಮನಸ್ಥಿತಿಯನ್ನೇ ನೋಡಿ... ಭಾರತದಲ್ಲಿ ಇಷ್ಟೊಂದು ಮಂದಿಯನ್ನು ಕೊಂದರೂ ಕೂಡ ಯಾವುದೇ ಎಗ್ಗಿಲ್ಲದೆ, ನಮ್ಮೂರಲ್ಲಿ ನಡೀತಾ ಇರೋ ಹಿಂಸಾಚಾರದಲ್ಲಿ ಭಾರತದ ಕೈವಾಡವಿದೆ ಎಂದು ಏನೂ ಆಗದಂತೆ ಹೇಳಿಬಿಡುತ್ತದೆ, ಅದಕ್ಕೆ ನಮ್ಮ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿ, ಆ ಆರೋಪಕ್ಕೊಂದು ಅಧಿಕೃತ ರೂಪ ಕೊಡುತ್ತಾರೆ ಎಂದಾದರೆ, ಅಷ್ಟೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ ಎಂಬ ಪುಟ್ಟ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇಕೆ? | Manmohan Singh, Indo Pak, Sharm El Sheikh Joint statement, Baluchistan, Mumbai terror, Yousuf Raza Gilani