ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮನಸ್ತಾಪ-ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ! (Man's penis cut | Garbage disposal | Catherine Kieu Becker | California)
ತನ್ನ ಪತಿಯೊಂದಿಗೆ ಮನಸ್ತಾಪ ಹೊಂದಿದ್ದ ಮಹಿಳೆಯೊಬ್ಬಳು ಆತನಿಗೆ ಊಟದಲ್ಲಿ ಮತ್ತು ಬರುವ ಔಷಧಿ ನೀಡಿದ ನಂತರ ಹಾಸಿಗೆಗೆ ಕಟ್ಟಿಹಾಕಿ ಮರ್ಮಾಂಗವನ್ನೇ ಚಾಕುವಿನಿಂದ ಕತ್ತರಿಸಿ ಕಸ ಸಂಸ್ಕರಣಾ ಯಂತ್ರಕ್ಕೆ ಹಾಕಿದ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಕುರಿತು ಮಾಹಿತಿ ನೀಡಿರುವ ಗಾರ್ಡನ್‌ ಗ್ರೋವ್‌ ಪೊಲೀಸ್‌ ಲೆಫ್ಟಿನೆಂಟ್‌ ಜೆಫ್‌ ನೈಟಿಂಗೇಲ್‌ ಅವರು, ಕ್ಯಾಥರೀನ್‌ ಕಿಯೂ ಬೇಕರ್ ತನ್ನ ಗಂಡನಿಗೆ ಊಟದಲ್ಲಿ ಮತ್ತು ಬರುವ ಔಷಧ ನೀಡಿ ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದ್ದು, ಆಕೆಯ ಗಂಡನ ಹೆಸರನ್ನು ಬಹಿರಂಗ ಪಡಿಸಿಲ್ಲ.
ಪ್ರಜ್ಞೆ ತಪ್ಪಿದ್ದ ತನ್ನ 51 ವರ್ಷದ ಗಂಡನನ್ನು ಕ್ಯಾಥರೀನ್‌ ಹಾಸಿಗೆಗೆ ಕಟ್ಟಿಹಾಕಿ 10 ಇಂಚಿನ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಳು, ಆತ ಎಚ್ಚರಗೊಂಡಾಗ ಮರ್ಮಾಂಗ ಕಟ್ಟಾಗಿತ್ತು ಎಂದು ತಿಳಿಸಿದ್ದಾರೆ.

ಕ್ಯಾಥರೀನ್‌ ಕಟ್‌ ಮಾಡಿದ ತನ್ನ ಗಂಡನ ಮರ್ಮಾಂಗವನ್ನು ಕಸ ಸಂಸ್ಕರಿಸುವ ಯಂತ್ರಕ್ಕೆ ಹಾಕಿ ಸ್ಚಿಚ್‌ ಆನ್‌ ಮಾಡಿದ್ದಾಗಿ ತಿಳಿಸಿದ್ದಾಳೆ.

ಇದಾದ ನಂತರ ಆಕೆ ಆಸ್ಪತ್ರೆಗೆ ಕರೆ ಮಾಡಿದ್ದಳು. ನಂತರ ವೈದ್ಯರು ಬಂದು ನೋಡಿದಾಗ ಆತ ಮಲಗಿದ್ದ ಹಾಸಿಗೆಯು ಸಂಪೂರ್ಣವಾಗಿ ರಕ್ತದಿಂದ ತೊಯ್ದು ಹೋಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ