ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರ ದಾಳಿ ಭಯ; ಯುದ್ಧ ನೌಕೆ ಬಲೂಚಿಸ್ತಾನಕ್ಕೆ ಶಿಫ್ಟ್ (Pak | Mehran naval base | Makran coast | PNS Mehran)
ಭಯೋತ್ಪಾದಕರ ದಾಳಿಯ ಭಯದಿಂದಾಗಿ ಪಾಕಿಸ್ತಾನ ನೌಕಾಸೇನೆಯು ಯುದ್ಧ ನೌಕೆಗಳನ್ನು ಮೆಗ್ರಾನ್‌ ನೌಕಾ ನೆಲೆಯಿಂದ ಬಲೂಚಿಸ್ತಾನದಲ್ಲಿರುವ ಮಕ್ರಾನ್‌ ಬಂದರಿಗೆ ಸ್ಥಳಾಂತರಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೇ 22ರಂದು ಲಾಡೆನ್ ಹತ್ಯೆಯ ಪ್ರತೀಕಾರ ಎಂಬಂತೆ ಪಾಕ್ ನೌಕಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಸುಮಾರು 16 ಗಂಟೆಗಳ ಕಾಲ ಹೋರಾಟ ನಡೆಸಿ ಉಗ್ರರ ದಾಳಿಗೆ ಅಂತ್ಯಹಾಡಿದ್ದರು. ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದರು.

ಮುಂಜಾಗರೂಕತಾ ಕ್ರಮವಾಗಿ ಯುದ್ಧ ನೌಕೆಗಳನ್ನು ಕರಾಚಿಯ ಮೆಹ್ರಾನ್‌ ನೌಕಾ ನೆಲೆಯಿಂದ ಬಲೂಚಿಸ್ತಾನದಲ್ಲಿರುವ ಓರ್ಮರಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಮೆಹ್ರಾನ್‌ ನೌಕಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಎಲ್ಲ ಯುದ್ಧ ನೌಕೆಗಳನ್ನು ಓರ್ಮರಾಕ್ಕೆ ಸ್ಥಳಾಂತರಿಸಲಾಯಿತು. ನೌಕಾ ಸೇನೆಯ ಮುಖ್ಯಸ್ಥರು ಉಗ್ರರ ದಾಳಿಯ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರಾಚಿಯಲ್ಲಿ ನೌಕಾಸೇನೆಯ ಯೋಧರು ಪ್ರಯಾಣಿಸುತ್ತಿದ್ದ ಬಸ್‌ಗಳ ಮೇಲೆ ಕಳೆದ ಏಪ್ರಿಲ್‌ 26 ಮತ್ತು28ರಂದು ದಾಳಿ ನಡೆಸಿದ ಕೆಲ ದಿನಗಳ ನಂತರ ಮೆಹ್ರಾನ್‌ ನೌಕಾ ನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯ ನಂತರ ಕೆಲವು ಯುದ್ಧನೌಕೆಗಳನ್ನು ಮೆಗ್ರಾನ್‌ ನೆಲೆಯಿಂದ ಸ್ಥಳಾಂತರಿಸಲಾಗಿದೆ ಎಂದು ನೌಕಾ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನೌಕಾ ಸೇನೆಯ ವಕ್ತಾರರು ನಮ್ಮ ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಉಗ್ರರ ದಾಳಿ ಭಯ, ಯುದ್ಧ ನೌಕೆ, ಬಲೂಚಿಸ್ತಾನಕ್ಕೆ ಶಿಫ್ಟ್