ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸೀಸ್: ಥ್ರಿಲ್‌ಗಾಗಿ ಅಜ್ಜಿ ಮೇಲೆ ರೇಪ್ ಮಾಡಿದ ಅಜ್ಜ! (Australian man | jailed | Thrill rape | Allan Richard Hodson)
'ಜಸ್ಟ್ ಥ್ರಿಲ್‌ಗಾಗಿ' ಆಸ್ಟ್ರೇಲಿಯಾದ 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿದಾತನಿಗೆ 11ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

65 ವರ್ಷದ ಅಲನ್‌ ರಿಚರ್ಡ್‌ ಹಡ್ಸನ್‌, ಕಳೆದ ಜನವರಿ 27ರಂದು ಸದರನ್‌ ಕ್ರಾಸ್ ರೈಲ್ವೆ ಸ್ಟೇಷನ್‌ ಸಾರ್ವಜನಿಕ ಶೌಚಾಲಯದಲ್ಲಿ 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಡಂಕನ್‌ ಅಲೆನ್‌, ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದ ಹಡ್ಸನ್‌ನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಇದೊಂದು ಆಘಾತಕಾರಿ ಕೃತ್ಯ ಎಂದು ಹೇಳಿದ್ದಾರೆ.

ಈ ದುಷ್ಕೃತ್ಯವು ವೃದ್ಧೆಯ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನ್ಯಾಯಾಧೀಶರು ಆರೋಪಿ ಹಡ್ಸನ್‌ಗೆ ಹೇಳಿದ್ದನ್ನು ಉಲ್ಲೇಖಿಸಿ ನ್ಯೂಸ್‌ ಡಾಟ್‌ ಕಾಂ ವರದಿ ಮಾಡಿದೆ.

ಆರೋಪಿಗೆ 8 ರಿಂದ 10ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಬೇಕು ಹಾಗೂ 6 ರಿಂದ 8 ವರ್ಷಗಳ ವರೆಗೆ ಪೆರೋಲ್‌ ನೀಡಬಾರದು ಎಂದು ಪ್ರಾಸಿಕ್ಯೂಷನ್‌ ತಿಳಿಸಿದೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಲನ್ ರಿಚರ್ಡ್ ಹಡ್ಸನ್, ಆಸ್ಟ್ರೇಲಿಯಾ, ಅಜ್ಜಿ ಮೇಲೆ ರೇಪ್, 11ವರ್ಷ ಜೈಲು ಶಿಕ್ಷೆ