ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿಯನ್ನ ಸುತ್ತುವರಿದಿದ್ದೇವೆ: ನೂತನ ಮಿಲಿಟರಿ ವಕ್ತಾರ (Muammar Gaddafi | Libyan leader | Latest News in Kannada| Latest International News)
ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಅವರನ್ನು ಸುತ್ತುವರಿದಿದ್ದು, ನಮಗೀಗ ಉಳಿದಿರುವ ಮಾರ್ಗವೆಂದರೆ ಅವರನ್ನು ಸೆರೆ ಹಿಡಿಯುವುದು ಅಥವಾ ಕೊಲ್ಲುವ ಆಯ್ಕೆ ಮಾತ್ರ ಲಿಬಿಯಾದ ಹೊಸ ಮಿಲಿಟರಿ ಆಡಳಿತದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಕುರಿತು ಮಾಹಿತಿ ನೀಡಿರುವ ಲಿಬಿಯಾ ಸೇನಾ ಆಡಳಿತದ ವಕ್ತಾರ ಅನೀಸ್‌ ಶರೀಫ್‌, ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಅವರಿನ್ನೂ ಲಿಬಿಯಾದಲ್ಲೇ ಇದ್ದು, 40 ಮೈಲಿ ಸೂರದಲ್ಲಿರುವ ಅವರ ಪ್ರದೇಶವನ್ನು ಬಂಡುಕೋರರು ಸುತ್ತುವರಿದಿದ್ದು, ಅವರನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬೇಹುಗಾರರನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅವರು (ಗಡಾಫಿ) ಪಾರಾಗಲು ಸಾಧ್ಯವಿಲ್ಲ ಎಂದು ಹೇಳಿರುವ ಶರೀಫ್‌, ಬಂದುಕೋರರು ಅವರನ್ನು ಕೊಲ್ಲಲು ತಯಾರಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಗಡಾಫಿ ಬಂಧನವು ಲಿಬಿಯಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಹೊಸ ಸರಕಾರಕ್ಕೆ ಹಿಡಿತ ಸಾಧಿಸಲು ಸಹಕಾರಿಯಾಗುತ್ತದೆ. ಮೊಅಮ್ಮರ್‌ ಗಡಾಫಿ ಅವರ ಬೆಂಬಲಿಗರು ಸಹಾರಾದಾಚೆಗಿನ ನಿಗರ್‌ ಕಡೆ ಓಡಿ ಹೋಗಿದ್ದು, ಮೊಅಮ್ಮರ್‌ ಗಡಾಫಿ ಹಿಡಿತದಲ್ಲಿರುವ ಪ್ರದೇಶದಲ್ಲಿನ ಅವರ ಬೆಂಬಲಿಗರು ಶರಣಾಗಲಿದ್ದಾರೆ ಎಂದು ಬಂಡುಕೋರ ಪಡೆ ಭಾವಿಸಿದೆ.

ಮುಅಮ್ಮರ್‌ ಗಡಾಫಿ ಅವರ ಬಹುತೇಕ ಬೆಂಬಲಿಗರು ನಿಗರ್‌ಗೆ ಓಡಿಹೋಗಿದ್ದಾರೆ ಎಂದು ಹೇಳಿರುವ ಬಂಡುಕೋರರು, ಲಬಿಯಾ ಗಡಿ ಸಮೀಪ ಇರುವ ಮರುಭೂಮಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬುದರ ಕುರಿತು ತಮಗೆ ಅಧಿಕೃತ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಲಿಬಿಯಾದ ನೆರೆ ರಾಷ್ಟ್ರವಾಗಿರುವ ನಿಗರ್‌ ಅಧ್ಯಕ್ಷರ ವಕ್ತಾರ ಮೊಸೋದೋ ಹಾಸೋಮಿ, ಮುಅಮ್ಮರ್‌ ಗಡಾಫಿ ಅವರ ಭದ್ರತಾ ಪಡೆ ಮುಖ್ಯಸ್ಥರು ಸೋಮವಾರ ತಮ್ಮ ದೇಶದ ಗಡಿಯನ್ನು ಪ್ರದೇಶಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ದೇಶವನ್ನು ಪ್ರವೇಶಿಸಿರುವ ಲಿಬಿಯಾದ ಕ್ರಾಂತಿಕಾರಿ ಪಡೆಯ ಮಾಜಿ ಮುಖ್ಯಸ್ಥ ಮನ್ಸೂರ್‌ದೋಗೆ ನಿಗರ್‌ ಸರಕಾರ ಬೆಂಗಾವಲು ಪಡೆಯನ್ನು ಕಳುಹಿಸಿದೆ. ಮನ್ಸೂರ್‌ ದೋ ಮುಅಮ್ಮರ್‌ ಗಡಾಫಿಯ ಸೋದರ ಸಂಬಂಧಿಯಾಗಿದ್ದು, ಅವರ ಆಪ್ತವಲಯದಲ್ಲಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಲಿಬಿಯಾ ಅಧ್ಯಕ್ಷ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ