ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೆಲಸಕ್ಕೆ ಹೋಗುವ ಮುಸ್ಲಿಮ್ ಮಹಿಳೆ ವಿರುದ್ಧ ಫತ್ವಾ ಇಲ್ಲ: ದಿಯೋಬಂದ್ (fatwa | Darul Uloom Deoband | Muslim working women | Adnan Munshi,)
ಕೆಲಸಕ್ಕೆ ಹೋಗುವ ಮುಸ್ಲಿಮ್ ಮಹಿಳೆ ವಿರುದ್ಧ ಫತ್ವಾ ಇಲ್ಲ: ದಿಯೋಬಂದ್
ನವದೆಹಲಿ, ಗುರುವಾರ, 13 ಮೇ 2010( 12:42 IST )
ಮುಸ್ಲಿಮ್ ಮಹಿಳೆಯರು ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ ಸಿದ್ದಾಂತಕ್ಕೆ ವಿರೋಧ ಎಂಬ ಹೇಳಿಕೆಯನ್ನು ಭಾರತದ ಬೃಹತ್ ಇಸ್ಲಾಮಿಕ್ ಸಂಘಟನೆಯಾದ ದಾರುಲ್ ಉಲೂಮ್ ದಿಯೋಬಂದ್ ಬುಧವಾರ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ನಾವು ಫತ್ವಾ ಹೊರಡಿಸಿಲ್ಲ, ಕೆಲಸ ಮಾಡುವ ಮುಸ್ಲಿಮ್ ಮಹಿಳೆಯರು ಇಸ್ಲಾಮ್ ಧರ್ಮದ ಪ್ರಕಾರವೇ ಬಟ್ಟೆ ತೊಡಬೇಕೆಂದಷ್ಟೇ ಸಲಹೆ ನೀಡಿರುವುದಾಗಿ ಹೇಳಿದೆ.
ಶರಿಯತ್ ಆಧಾರದ ಮೇಲೆ ನಾವು ಕೇವಲ ಅಭಿಪ್ರಾಯವನ್ನಷ್ಟೇ ಹೇಳಿದ್ದೇವೆ, ಹಾಗಾಗಿ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮುಸ್ಲಿಮ್ ಮಹಿಳೆಯರು ಇಸ್ಲಾಂ ಪದ್ಧತಿಯಂತೆ ಬಟ್ಟೆ ಧರಿಸಬೇಕೆಂದು ಸೂಚಿಸಲಾಗಿತ್ತು ಎಂದು ಉತ್ತರ ಪ್ರದೇಶದ ಸಾಹಾರನ್‌ಪುರದ ಸೆಮಿನಾರಿ ವಕ್ತಾರ ಮೌಲಾನಾ ಅದ್ನಾನ್ ಮುನ್ಶಿ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಪುರುಷರ ಜತೆ ಕೆಲಸ ಮಾಡುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿರುವ ಮಾಧ್ಯಮದ ವರದಿ ಸತ್ಯಕ್ಕೆ ದೂರವಾದದ್ದು ಎಂದು ವಿವರಿಸಿದ್ದಾರೆ. ಈ ಬಗ್ಗೆ ಐಎಎನ್‌ಎಸ್‌ಗೆ ದೂರವಾಣಿ ಮೂಲಕ ಮಾತನಾಡುತ್ತ ಮೌಲಾನಾ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಬೃಹತ್ ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್, ಕೆಲಸಕ್ಕೆ ಹೋಗುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿ, ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ತಿಳಿಸಿತ್ತು.
ಪುರುಷರು ಮತ್ತು ಮಹಿಳೆಯರು ಜತೆಯಾಗಿ ಕೆಲಸ ಮಾಡುವ ಮತ್ತು ಮುಖ ಪರದೆಯಿಲ್ಲದೆ ಪುರುಷರ ಜತೆ ಮಾತನಾಡಲು ಅವಕಾಶ ಮಾಡಿಕೊಡುವ ಖಾಸಗಿ ಅಥವಾ ಸರಕಾರಿ ಕೆಲಸಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಫತ್ವಾದಲ್ಲಿ ಸೂಚಿಸಲಾಗಿತ್ತು.
ಮುಸ್ಲಿಂ ಮಹಿಳೆ ಕಚೇರಿಯಲ್ಲಿರುವ ಸಂದರ್ಭದಲ್ಲಿ ಬುರ್ಖಾ ತೊಡುವುದು ಕಡ್ಡಾಯ ಮತ್ತು ಪುರುಷ ಸಹೋದ್ಯೋಗಿಗಳ ಜತೆ ಬೆರೆಯಬಾರದು ಎಂದು ಶರಿಯತ್ ಸ್ಪಷ್ಟವಾಗಿ ಹೇಳಿದೆ ಎಂದು ದಿಯೋಬಂದ್ ಧರ್ಮಗುರುಗಳು ಹೇಳಿದ್ದರು.