ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್ ಸಿಂಗ್ ಪಾಕ್ ಏಜೆಂಟ್: ತೊಗಾಡಿಯಾ ಕಿಡಿ (Praveen Togadia | Digvijay Singh | VHP | Hemant Karkare | 26/11 terror strikes)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಉಗ್ರರಿಗೆ ಬಲಿಯಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು ದಾಳಿ ನಡೆಯುವ ಎರಡು ಗಂಟೆ ಮೊದಲು ತನಗೆ ಕರೆ ಮಾಡಿ ಹಿಂದೂ ಭಯೋತ್ಪಾದಕರಿಂದ ಜೀವ ಬೆದರಿಕೆ ಇತ್ತೆಂದು ಹೇಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಆರೋಪಕ್ಕೆ ವಿಹಿಂಪನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ ಭಾನುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕರ್ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಹೇಳಿಕೆ ಗಮನಿಸಿದರೆ 'ಪಾಕಿಸ್ತಾನ ಏಜೆಂಟ್' ಆಗಿರುವವರು ಮಾತ್ರ ಇಂತಹ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿಗೆ ಆಗಮಿಸಿದ್ದ ತೊಗಾಡಿಯಾ ದಿಗ್ವಿಜಯ ಸಿಂಗ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ರಾಮ ಮಂದಿರ ಪ್ರಕರಣ ಕುರಿತಂತೆ ಕೇಂದ್ರದ ಆಡಳಿತಾರೂಢ ಯುಪಿಎ ಸರಕಾರದ ನಿಧಾನಪ್ರವೃತ್ತಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲೇ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗಬೇಕೆಂಬುದು ನೂರು ಕೋಟಿ ಹಿಂದೂಗಳ ಆಶಯವಾಗಿದೆ ಎಂದರು.

ದಿಗ್ವಿಜಯ್ ಹೇಳಿಕೆ; 2008ರ ನವೆಂಬರ್ 26ರಂದು ಮುಂಬೈ ದಾಳಿ ಆರಂಭವಾಗುವ ಎರಡು ಗಂಟೆ ಮೊದಲು ಸಂಜೆ ಏಳು ಗಂಟೆಗೆ ಹೇಮಂತ್ ಕರ್ಕರೆ ನನ್ನ ಮೊಬೈಲ್‌ಗೆ ಕರೆ ಮಾಡಿದ್ದರು. ತಾನು ನಡೆಸುತ್ತಿರುವ ಮಾಲೆಗಾಂವ್ ಸ್ಫೋಟದ ತನಿಖೆಯಿಂದ ಅಸಮಾಧಾನಗೊಂಡ ಮಂದಿ ನನ್ನ ಕುಟುಂಬ ಮತ್ತು ಜೀವಕ್ಕೆ ನಿರಂತರ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದರು.

ತೀರಾ ಚಿಂತಿತರಾಗಿದ್ದ ಕರ್ಕರೆಯವರು ಬೆದರಿಕೆ ಕರೆ ಬಂದಿರುವ ದೂರವಾಣಿ ಸಂಖ್ಯೆಗಳನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇನೆ. ಆದರೆ ಅವರ ಪತ್ರಿಕೆಗಳಲ್ಲಿ ನನ್ನ ಬಗ್ಗೆ ವೈಯಕ್ತಿಕ ದಾಳಿ ನಡೆಸಿರುವುದು ಮತ್ತು ಬೆದರಿಕೆಗಳು ಬಂದಿರುವುದರಿಂದ ನಾನು ತೀವ್ರ ನಿರುತ್ಸಾಹಗೊಂಡಿದ್ದೇನೆ ಮತ್ತು ಖಿನ್ನಗೊಂಡಿದ್ದೇನೆ ಎಂದಿದ್ದರು ಎಂದು ಸಿಂಗ್ ತಿಳಿಸಿದ್ದರು.

ದಿಗ್ವಿಜಯ್ ಹೇಳಿಕೆ ತನಿಖೆಯಾಗಲಿ; ಬಿಜೆಪಿ, ಶಿವಸೇನೆ

ಹಿಂದೂ ಉಗ್ರರಿಂದ ಜೀವ ಬೆದರಿಕೆ ಇತ್ತೆಂದು ಹೇಳಿದ್ದ ಕರ್ಕರೆ?
ಸಂಬಂಧಿತ ಮಾಹಿತಿ ಹುಡುಕಿ