ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ನೀತಿ: ರಾಜ್ಯ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪವಿಲ್ಲ (Illegal Mining | Supreme Court | Karnataka Government | Yeddyurappa)
ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸುವ ರಾಜ್ಯ ಸರಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟು ಸೋಮವಾರ ಸ್ಪಷ್ಟಪಡಿಸಿದ್ದು, ಗಣಿ ಧಣಿಗಳಿಗೆ ಹಿನ್ನಡೆಯಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವು ರೂಪಿಸಿರುವ ಗಣಿ ನೀತಿಯನ್ನು ಪ್ರಶ್ನಿಸಿ ಗಣಿ ಕಂಪನಿಗಳು ಕೋರ್ಟಿನ ಮೊರೆ ಹೋಗಿದ್ದವು. ಅವರ ಮನವಿಯನ್ನು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದ ನ್ಯಾಯಪೀಠವು ತಳ್ಳಿ ಹಾಕಿದೆ.

ಅಕ್ರಮ ಗಣಿಗಾರಿಕೆ, ಅಕ್ರಮ ಸಾಗಾಟ ಮತ್ತು ಅಕ್ರಮ ಸಂಗ್ರಹಣೆಯನ್ನು ನಿಷೇಧಿಸಿ ಗಣಿ ನೀತಿ ರೂಪಿಸಿ ನಿಯಂತ್ರಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರವು ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿತು.

ಅಕ್ರಮ ಗಣಿಗಾರಿಕೆ ಕುರಿತು ವ್ಯಾಪಕ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ 2010ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊರದೇಶಕ್ಕೆ ಅದಿರು ಸಾಗಿಸುವುದನ್ನು ನಿಷೇಧಿಸಿದ್ದರು. ಆ ಬಳಿಕ, ಪ್ರಮುಖ ಬಂದರುಗಳಲ್ಲಿ ರಾಶಿ ಬಿದ್ದಿದ್ದ ಗಣಿಗಳ ರಫ್ತಿಗೆ ಸುಪ್ರೀಂ ಕೋರ್ಟು ಅನುಮತಿ ನೀಡಿತ್ತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ