ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಲೋಕಪಾಲ ಅಂಗೀಕರಿಸದಿದ್ದರೆ ದೇಶವ್ಯಾಪಿ ಚಳುವಳಿ: ಅಣ್ಣಾ ಎಚ್ಚರಿಕೆ (jan lokpal bill | Anna Hazare | Central Govt | New Delhi)
ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಕೇಂದ್ರ ಸರಕಾರದ ಮುಂದಿಟ್ಟಿರುವ ಆಗಸ್ಟ್ 30ರ ನಿಗದಿತ ಗಡುವಿನೊಳಗೆ ಮಸೂದೆ ಅಂಗೀಕರಿಸದಿದ್ದರೆ ದೇಶವ್ಯಾಪಿ ಭಾರಿ ಚಳುವಳಿ ಹಮ್ಮಿಕೊಳ್ಳುವುದಾಗಿ ರಾಷ್ಟ್ರ ರಾಜಧಾನಿಯಲ್ಲಿ ನಿರಶನ ನಿರತರಾಗಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಕೆ ರವಾನಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ಭಾನುವಾರ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಗಾಂಧಿವಾದಿ ಅಣ್ಣಾ ಹಜಾರೆ ನಮ್ಮ ಯಾವುದೇ ಬೇಡಿಕೆಗೆ ಸರಕಾರ ಒಪ್ಪಿಗೆ ನೀಡಿಲ್ಲ ಎಂದು ಆಪಾದಿಸಿದರು.

ಲೋಕಪಾಲ ವಿಧೇಯಕ ಬಿಕ್ಕಟ್ಟು ಪರಿಹಾರಕ್ಕೆ ಸರಕಾರ ಭಾನುವಾರ ಪ್ರಸ್ತಾವನೆಯನ್ನು ರವಾನಿಸಿತ್ತು. ಆದರೆ ಇದರಲ್ಲಿ ಹೊಸತೇನು ಇಲ್ಲ. ನಮ್ಮ ಯಾವುದೇ ಬೇಡಿಕೆ ಈಡೀರಿಕೆಗೆ ಒಪ್ಪಿಗೆ ಲಭಿಸಿಲ್ಲ ಎಂದರು.

ದೇಶ ಬಿಟ್ಟು ತೊಲಗಿ...
ಈ ನಡುವೆ ಕೇಂದ್ರ ಸರಕಾರದವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಅಂಗೀಕರಿಸಲು ಸಾಧ್ಯವಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದು ಗುಡುಗಿದ್ದಾರೆ. ಆಗಸ್ಟ್ 30ರ ನಿಗದಿತ ಗಡುವಿನೊಳಗೆ ಮಸೂದೆಗೆ ಅನುಮೋದನೆ ದೊರಕದಿದ್ದಲ್ಲಿ ಭಾರಿ ಆಂದೋಲನವೇ ನಡೆಯಲಿದೆ ಎಂದು ಎಚ್ಚರಿಸಿದರು.

ಭ್ರಷ್ಟಾಚಾರ ಹೊಗಲಾಡಿಸಲು ಸರಕಾರಕ್ಕೆ ಮನಸ್ಸಿಲ್ಲ. ಇಂದೊಂದು ನಿಯತ್ತಿಲ್ಲದ ಸರಕಾರ. ಸಂಸತ್‌ನಲ್ಲಿ ನಾಗರಿಕ ಸಮಿತಿ ಲೋಕಪಾಲ ಕರಡು ಪ್ರತಿಯನ್ನು ಮಂಡಿಸಿ ಇಲ್ಲವೇ ಅಧಿಕಾರದಿಂದ ಕೆಳಗಿಳಿಯಿರಿ. ಒಂದು ವೇಳೆ ನಿಗದಿತ ಗಡುವಿನೊಳಗೆ ವಿಧೇಯಕ ಮಂಡಿಸದೇ ಹೋದಲ್ಲಿ ಹಿಂದೆಂದೂ ಕಾಣದ ಕ್ರಾಂತಿಗೆ ಸರಕಾರ ಸಾಕ್ಷಿಯಾಗಬೇಕಾಗುತ್ತದೆ ಎಂದು ಗುಡಿಗಿದರು.

ಸಂಸದರ ಮನೆ ಮುಂದೆ ಭಜನೆ...
ಇದೇ ಸಂದರ್ಭದಲ್ಲಿ ಬೆಂಬಲಿಗರಿಗೆ ಕರೆ ನೀಡಿರುವ ಅಣ್ಣಾಜಿ, ಸಂಸದರ ಮನೆ ಮುಂದೆ ಧರಣಿ ಕುಳಿತು ಭಜನೆ ಮಾಡಿ ಎಂದಿದ್ದಾರೆ. ಭಜನೆಯಲ್ಲಿ ದೊಡ್ಡ ಶಕ್ತಿಯೇ ಇದೆ. ಇದು ನನ್ನ ಅನುಭವದಿಂದ ಕಂಡುಕೊಂಡಿದ್ದೇನೆ ಎಂದರು.

ರಾಜಿ ಇಲ್ಲ...
ಪ್ರಧಾನ ಮಂತ್ರಿ ಹಾಗೂ ನ್ಯಾಯಾಂಗವನ್ನು ಲೋಕಪಾಲ ವ್ಯಾಪ್ತಿಗೆ ತರುವ ವಿಚಾರದಲ್ಲಿ ಯಾವುದೇ ರಾಜಿಗೆ ತಯಾರಿಲ್ಲ ಎಂದು ಅಣ್ಣಾ ತಿಳಿಸಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಲೋಕಪಾಲ ಮಸೂದೆ, ಅಣ್ಣಾ ಹಜಾರೆ, ದೇಶವ್ಯಾಪಿ ಚಳುವಳಿ, ಕೇಂದ್ರ ಸರಕಾರ