ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಯುವುದಕ್ಕೂ ಹೆದರುವುದಿಲ್ಲ; ಚಿಕಿತ್ಸೆಗೆ ಅಣ್ಣಾ ನಕಾರ (Anna Hazare Fast | Anna Hazare | Central Govt | Jan Lokpal Bill)
ಸಶಕ್ತ ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿಕೊಂಡು ಬರುತ್ತಿರುವ ಗಾಂಧಿವಾದಿ ಅಣ್ಣಾ ಹಜಾರೆ ಆರೋಗ್ಯ ವಿಷಮ ಪರಿಸ್ಥಿತಿ ತಲುಪಿದ್ದಂತೆಯೇ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ ತನ್ನ ಅಂತರಾತ್ಮದ ಸಲಹೆಯಂತೆ ಸಾಯುವುದಕ್ಕೂ ನಾನು ಹೆದರಲ್ಲ ಎಂದಿರುವ ಅಣ್ಣಾಜಿ ವೈದ್ಯರ ಚಿಕಿತ್ಸೆ ಬೇಡ ಎಂದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ಬುಧವಾರ ರಾತ್ರಿ ಅಣ್ಣಾ ಅವರ ಕಿಡ್ನಿಯಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಮನಗಂಡ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದರು. ಆದರೆ ವೈದ್ಯರ ತನ್ನ ಬಗ್ಗೆ ಅತೀವ ಖಾಳಜಿ ವಹಿಸುತ್ತಿದ್ದರೂ ಸಹ ತನ್ನ ಅಂತರಾತ್ಮದ ಹೇಳಿಕೆಯಂತೆ ನಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ತಮ್ಮ ಕಿಡ್ನಿಗಳು ತುಂಬಾ ದುರ್ಬಲವಾಗಿದ್ದು ಡ್ರಿಪ್ಸ್ ಅಗತ್ಯವಿದೆ ಎಂದು ವೈದರು ಹೇಳಿದ್ದರು. ಆದರೆ ಅದಕ್ಕೆ ನನ್ನ ಅಂತ:ಪ್ರಜ್ಞೆ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ.

ನಾನು ಸತ್ತರೆ ಅದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಇಲ್ಲಿ ಅನೇಕ ಮಂದಿ ಅಣ್ಣಾಗಳು ಇಲ್ಲಿದ್ದಾರೆ. ಅವರು ನಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದಿದ್ದಾರೆ.

ಅಭಿಮಾನಿಗಳಿಗೆ ಕರೆ...
ಇದೇ ಸಂದರ್ಭದಲ್ಲಿ ಸರ್ಕಾರವೇನಾದರೂ ನನ್ನನ್ನು ಬಲವಂತವಾಗಿ ಬಂಧಿಸಿ ಕರೆದೊಯ್ಯುವ ಯತ್ನಕ್ಕೆ ಮುಂದಾದರೆ ಮುಂದಿರುವ ಪ್ರವೇಶ ದ್ವಾರ ಬಳಿ ಅವರನ್ನು ತಡೆಯಿರಿ ಎಂದು ನೆರೆದಿದ್ದ ಅಭಿಮಾನಿಗಳಿಗೆ ಅಣ್ಣಾ ಕರೆ ನೀಡಿದರು.

ಮಾತು ಮುಂದುವರಿಸಿದ ಗಾಂಧಿವಾದಿ ಅಣ್ಣಾ, ಆಗಸ್ಟ್ 30ರ ನಿಗದಿತ ಗಡುವಿನೊಳಗೆ ಜನಲೋಕಪಾಲ ಮಸೂದೆಗೆ ಅನುಮೋದನೆ ನೀಡದೇ ಹೋದಲ್ಲಿ ಸಾವಿರಾರು ಕಾರ್ಯಕರ್ತರು ಸಂಸದರ ಮನೆ ಮುಂದೆ ತೆರಳಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ಚರ್ಚೆ ಫಲಪ್ರದವಾಗಿಲ್ಲ...
ಈ ನಡುವೆ ಸರಕಾರವು ಸಂಧಾನದ ಪ್ರಕ್ರಿಯೆಯನ್ನು ಆರಂಭಿಸಿದೆ. ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಅಣ್ಣಾ ಬಳಗದ ಅರವಿಂದ್ ಕ್ರೇಜಿವಾಲ್, ಕಿರಣ್ ಬೇಡಿ ಮತ್ತು ಪ್ರಶಾಂತ್ ಭೂಷಣ್ ಜತೆ ಮಂಗಳವಾರ ರಾತ್ರಿ ನಡೆಸಿದ ಚರ್ಚೆ ಅಪೂರ್ಣವಾಗಿದೆ.

ಆದರೆ ಪ್ರಧಾನಿ ಅವರನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ತರುವ ಕುರಿತಂತೆ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮಂಗಳವಾರ ಉಭಯ ಬಣಗಳ ನಡುವೆ ನಡೆಯಲಿರುವ ಸಭೆಯಲ್ಲಿ ಬಿಕ್ಕಟ್ಟು ಇತ್ಯರ್ಥವಾಗುವ ನಿರೀಕ್ಷೆಯಿದೆ.

ಜನಲೋಕಪಾಲ ವಿಧೇಯಕವನ್ನು ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸುವ ಪ್ರಸ್ತಾಪವನ್ನು ಅಣ್ಣಾ ಬಳಗ ತಿರಸ್ಕರಿಸಿದ್ದು, ಇದೇ ಅಧಿವೇಶನದಲ್ಲಿ ನಾಗರಿಕ ಸಂಘಟನೆಗಳ ಜನಲೋಕಪಾಲ ಮಸೂದೆ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ, ಕೇಂದ್ರ ಸರಕಾರ, ಅರವಿಂದ್ ಕ್ರೇಜಿವಾಲ್