ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣೆ ಸುಧಾರಣೆ; ಶೀಘ್ರದಲ್ಲೇ ಪ್ರಧಾನಿಗೆ ಅಣ್ಣಾ ಹಜಾರೆ ಪತ್ರ (Anna Hazare | Manmohan Singh | right to recall elected representatives | Aravind Kejriwal)
ಚುನಾವಣಾ ಸುಧಾರಣೆ, ಜನಪ್ರತಿನಿಧಿಗಳನ್ನು ವಾಪಾಸ್ ಕರೆಯಿಸಿಕೊಳ್ಳುವ ಮತ್ತು ತಿರಸ್ಕರಿಸುವ ಹಕ್ಕು ಸೇರಿದಂತೆ ಸಂಸದರ ಕಾರ್ಯವೈಖರಿ ಪರಿಶೀಲನೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶೀಘ್ರವೇ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಬಲ ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸಿದ ನಿರಶನದ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎರಡು ದಿನಗಳ ಕಾಲದ ಅಣ್ಣಾ ಹಜಾರೆ ತಂಡದ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚುನಾವಣಾ ಸುಧಾರಣೆ ಮತ್ತು ಭೂ ಸ್ವಾಧೀನ ವಿಧೇಯಕ ಕುರಿತು ಪ್ರಧಾನಿ ಅಭಿಪ್ರಾಯ ಕೋರಿ ಗಾಂಧಿವಾದಿ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ ಎಂದು ನಾಗರಿಕ ಸಮಿತಿಯ ಸದಸ್ಯರಾಗಿರುವ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ರಾಳೇಗಣ್ ಸಿದ್ಧಿಯಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಮಾಜಿ ನ್ಯಾವಾದಿ ಸಂತೋಷ್ ಹೆಗ್ಡೆ ಸಹ ಭಾಗವಹಿಸಿದ್ದರು. ಈ ಸಂದರ್ಭಧಲ್ಲಿ ಪ್ರಶಾಂತ್ ಭೂಷಣ್, ಕಿರಣ್ ಬೇಡಿ ಮತ್ತು ಮೇಧಾ ಪಾಟ್ಕರ್ ಸಹ ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಉಮೇದುದಾರರನ್ನು ತಿರಸ್ಕರಿಸಲು ಮತಯಂತ್ರದಲ್ಲಿ ಅವಕಾಶ ನೀಡಬೇಕು ಹಾಗೂ ಕಾರ್ಯಕ್ಷಮತೆ ಉತ್ತಮವಾಗಿಲ್ಲದ ಜನಪ್ರತಿನಿಧಿಗಳನ್ನು ವಾಪಸ್ ಕರೆಯಿಸಿಕೊಳ್ಳುವ ಹಕ್ಕು ಮತದಾರರಿಗೆ ಇರಬೇಕು ಎಂಬುದರ ವಿಚಾರವಾಗಿ ಶೀಘ್ರವೇ ಪ್ರಧಾನಿ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಚುನಾವಣೆ ಸುಧಾರಣೆ, ಪ್ರಧಾನಿ ಮಂತ್ರಿ, ಮನಮೋಹನ್ ಸಿಂಗ್, ಜನಪ್ರತಿನಿಧಿ, ಗಾಂಧಿವಾದಿ, ಜನಲೋಕಪಾಲ ಮಸೂದೆ, ಅರವಿಂದ ಕ್ರೇಜ್ರಿವಾಲ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ