ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲಿ ಚಿದಂಬರಂ ಕೂಡಾ ಆರೋಪಿ : ಸುಬ್ರಹ್ಮಣ್ಯಂ ಸ್ವಾಮಿ (Subramanian Swamy | 2G scam| P Chidambaram | Janata Party | CBI | A Raja)
2ಜಿ ಹಗರಣದಲ್ಲಿ ಚಿದಂಬರಂ ಕೂಡಾ ಆರೋಪಿ : ಸುಬ್ರಹ್ಮಣ್ಯಂ ಸ್ವಾಮಿ
ನವದೆಹಲಿ, ಶುಕ್ರವಾರ, 16 ಸೆಪ್ಟೆಂಬರ್ 2011( 09:11 IST )
2ಜಿ ತರಂಗಾಂತರ ಹಂಚಿಕೆಯಲ್ಲಿ ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಆರೋಪಿಯಾಗಿಸಲು ನಿರ್ದೇಶನ ನೀಡುವಂತೆ, ವಿಶೇಷ ವಿಚಾರಣಾ ನ್ಯಾಯಾಲಯದ ಮುಂದೆ ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಒಪಿ.ಸೈಯಾನಿ, ಗೃಹ ಸಚಿವ ಪಿ.ಚಿದಂಬರಂ ಸಾಕ್ಷ್ಯಗಳು ದಾಖಲಿಕೆ ಅಗತ್ಯವಾಗಿದೆ ಎಂದು ಹೇಳಿರುವುದು ಸ್ವಾಮಿಯವರಿಗೆ ಮತ್ತಷ್ಟು ಬಲಬಂದಂತಾಗಿದೆ.
ಬಹುಕೋಟಿ 2ಜಿ ಹಗರಣದಲ್ಲಿ ಕೇವಲ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮಾತ್ರ ಭಾಗಿಯಾಗಿಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸತಕ್ಕದ್ದು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
2ಜಿ ತರಂಗಾಂತರ ಹಂಚಿಕೆ ಸಚಿವ ಸಂಪುಟದ ನಿರ್ಧಾರವಾಗಿದೆ. ತರಂಗಗುಚ್ಚ ಹಂಚಿಕೆ ಸಂದರ್ಭದಲ್ಲಿ ಪಿ.ಚಿದಂಬರಂ ವಿತ್ತಖಾತೆ ಸಚಿವರಾಗಿದ್ದರಿಂದ ಸಂಪುಟದ ತೀರ್ಮಾನದಲ್ಲಿ ಅವರ ಪಾತ್ರವೂ ಇದೆ ಎಂದು ತಿಳಿಸಿದ್ದಾರೆ.
ನನ್ನನ್ನು ಸೇರಿದಂತೆ ಸಾಕ್ಷಿದಾರರಿಗೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದು, ಚಿದಂಬರಂ ಅವರನ್ನು ಸಹ-ಆರೋಪಿಯಾಗಿಸಬೇಕು ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
2ಜಿ ತರಂಗಗುಚ್ಚ ಹಂಚಿಕೆ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಜಂಟಿಯಾಗಿ ತೆಗೆದುಕೊಳ್ಳಲಾಗಿದೆ. ಆದರೆ, ಸಿಬಿಐ ದಾಖಲಿಸಿದ ಆರೋಪ ಪಟ್ಟಿ ಯಲ್ಲಿ ಚಿದಂಬರಂ ಹೆಸರನ್ನು ಕೈಬಿಡಲಾಗಿದ್ದರಿಂದ ಆರೋಪಪಟ್ಟಿ ಅಪೂರ್ಣವಾಗಿದೆ. ಆದ್ದರಿಂದ, ಕೂಡಲೇ ಪಿ.ಚಿದಂಬರಂ ಹೆಸರನ್ನು ಸೇರ್ಪಡೆಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.