ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆತ್ಮಹತ್ಯೆ ಹಾದಿಯಲ್ಲಿದೆ ಯುಪಿಎ, ಚುನಾವಣೆಗೆ ಸಜ್ಜಾಗಿ: ಬಿಜೆಪಿ (BJP national executive | UPA government | Sushma Swaraj | L.K. Advani)
ಹಲವಾರು ಹಗರಣಗಳು ಹಾಗೂ ಭ್ರಷ್ಟಾಚಾರದಲ್ಲಿ ಸಿಲುಕಿರುವ ಯುಪಿಎ ನೇತೃತ್ವದ ಕೇಂದ್ರ ಸರಕಾರವು ದಿಕ್ಕುತಪ್ಪಿದ್ದು, ಪೂರ್ಣಾವಧಿ ಅಧಿಕಾರ ನಡೆಸುವುದು ಅನುಮಾನ. ಅದು ಈಗಾಗಲೇ ಆತ್ಮಹತ್ಯೆಯ ಹಾದಿಯಲ್ಲಿದ್ದು, ಚುನಾವಣೆಗೆ ಸಿದ್ಧವಾಗಿರಬೇಕು ಎಂದು ಬಿಜೆಪಿಯು ತನ್ನ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ, ರಣ ಕಹಳೆ ಮೊಳಗಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನವದೆಹಲಿಯಲ್ಲಿ ಎರಡು ದಿನ ನಡೆದ ಬಿಜೆಪಿ ಕಾರ್ಯಕಾರಿಣಿಯ ಮುಕ್ತಾಯ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌, ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.

ಈ ಸರಕಾರ ಇನ್ನು ಹೆಚ್ಚು ದಿನ ಅಧಿಕಾರ ನಡೆಸುವುದು ಅನುಮಾನ. ಈ ಸವಾಲನ್ನು ಎದುರಿಸಲು ಸಿದ್ಧವಾಗಿರುವುದು ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯ ಹೊಣೆಗಾರಿಕೆಯಾಗಿದೆ ಎಂಬ ಸುಷ್ಮಾ ಹೇಳಿಕೆಯನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್‌ ಜೇಟ್ಲಿ ಉಲ್ಲೇಖಿಸುತ್ತಾ ನುಡಿದರು.

ಕಾಂಗ್ರೆಸ್‌ ಸರಕಾರ ಮಾಡಿರುವ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಹಾಗೂ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷದ ವರ್ಚಸ್ಸನ್ನು ಉಳಿಸಬೇಕು ಹಾಗೂ ಮಿತ್ರಪಕ್ಷಗಳೊಂದಿಗೆ ಜೊತೆಗೂಡಿ ಹೋರಾಡಬೇಕು ಎಂದು ಜೇಟ್ಲಿ ಹೇಳಿದ್ದಾರೆ.

ಆತ್ಮಹತ್ಯೆಯ ಹಾದಿಯಲ್ಲಿದೆ ಸರ್ಕಾರ

ಏತನ್ಮಧ್ಯೆ, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಆಡ್ವಾಣಿ ಮಾತನಾಡಿ, ಹಗರಣಗಳ ಸರಮಾಲೆಯನ್ನೇ ಹೊತ್ತಿರುವ ಯುಪಿಎ ನೇತೃತ್ವದ ಕೇಂದ್ರ ಸರಕಾರವು ಆತ್ಮಹತ್ಯೆಯ ಹಾದಿಯಲ್ಲಿದ್ದು, ಅದಕ್ಕೆ ನಾವೇನೂ ತೊಂದರೆ ಮಾಡುವ ಅಗತ್ಯವಿಲ್ಲ. ತಾನಾಗಿಯೇ ಉರುಳುತ್ತದೆ ಎಂದು ತಿಳಿಸಿದ್ದಾರಲ್ಲದೆ, ಸರಕಾರವು ಸ್ಥಬ್ಧವಾಗಿದೆ. ಜನರು ಅದರ ಆಡಳಿತದಿಂದ ರೋಸಿ ಹೋಗಿದ್ದಾರೆ ಎಂದರು.

ಸರಕಾರವು ಭ್ರಷ್ಟಾಚಾರದಿಂದಲೇ ತುಂಬಿ ತುಳುಕಾಡುತ್ತಿದ್ದು, ಅದಕ್ಕೆ ಅಧಿಕಾರದಲ್ಲಿರುವ ಅರ್ಹತೆಯೇ ಇಲ್ಲ. ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಚುನಾವಣೆಗೆ ಸಿದ್ಧರಾಗಿ ಎಂದೂ ಆಡ್ವಾಣಿ ಹೇಳಿದರು.

ಮೋದಿ - ಆಡ್ವಾಣಿ ಭಿನ್ನಮತವಿಲ್ಲ
ಆಡ್ವಾಣಿ ಭ್ರಷ್ಟಾಚಾರದ ವಿರುದ್ಧ ಕೈಗೊಳ್ಳುವ ರಥಯಾತ್ರೆ ಕುರಿತು ಅವರು ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ ಭಿನ್ನಾಭಿಪ್ರಾಯವೆದ್ದಿದೆ. ಇದರಿಂದಾಗಿಯೇ ಮೋದಿ ಅವರು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿಲ್ಲ ಎಂಬ ವರದಿಗಳನ್ನು ಅಲ್ಲಗಳೆದ ಜೇಟ್ಲಿ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಏಕತೆಯೇ ನಮ್ಮ ಈಗಿನ ಮುಖ್ಯ ಅಜೆಂಡಾ ಎಂದೂ ಹೇಳಿದರು.

ಬಿಜೆಪಿಯು ಈಗಾಗಲೇ ಸರಕಾರದ ಹಲವಾರು ಭ್ರಷ್ಟಾಚಾರಗಳನ್ನು ಬಯಲಿಗೆಳೆದಿರುವುದರಿಂದ, ಪ್ರಧಾನ ಮಂತ್ರಿಯವರು ದಿಢೀರನೇ ಎಚ್ಚೆತ್ತುಕೊಂಡು, ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಮಧ್ಯಂತರ ಚುನಾವಣೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಮನಮೋಹನ್ ಸಿಂಗ್ ಅವರ ಹತಾಶೆಯ ಸೂಚನೆ ಹಾಗೂ ಮುಖ್ಯ ವಿಷಯದಿಂದ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಜೇಟ್ಲಿ ನುಡಿದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯುಪಿಎ ಸರಕಾರ, ಬಿಜೆಪಿ ಕಾರ್ಯಕಾರಿಣಿ, ಎಲ್ಕೆ ಆಡ್ವಾಣಿ, ಸುಷ್ಮಾ ಸ್ವರಾಜ್, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ