ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಲ ಮಾಡಿಯಾದ್ರೂ ಅಣೆಕಟ್ಟು ಎತ್ತರಿಸುವೆ: ಯಡಿಯೂರಪ್ಪ (Krishna Water Disputes | Tribunal | Almati Dam | Karnataka)
Bookmark and Share Feedback Print
 
ಆಲಮಟ್ಟಿ ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣಾ ಜಲ ನ್ಯಾಯಮಂಡಳಿ ನೀಡಿರುವ ತೀರ್ಪು ರಾಜ್ಯಕ್ಕೆ ಅನುಕೂಲವಾಗಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಮಾರು ನಾಲ್ಕು ದಶಕಗಳ ಕಾಲದ ಕನ್ನಡಿಗರ ಬೇಡಿಕೆ ಈಡೇರಿದೆ. ಹೊರ ರಾಜ್ಯಗಳಿಂದ ಸಾಲ ಮಾಡಿಯಾದರೂ ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524.26 ಮೀಟರ್‌ಗೆ ಏರಿಸುವುದಾಗಿ ತಿಳಿಸಿದ್ದಾರೆ.

ಬಿ ಸ್ಕೀಮ್‌ನಲ್ಲಿ ನಾವು 278 ಟಿಎಂಸಿ ನೀರನ್ನು ಮಂಜೂರು ಮಾಡುವಂತೆ ಕೇಳಿಕೊಂಡಿದ್ದೆವು. ಆದರೆ, ನಮಗೆ 177 ಟಿಎಂಸಿ ನೀರು ಲಭ್ಯವಾಗಿದೆ. ಒಟ್ಟಾರೆ ಈ ತೀರ್ಪು ತೃಪ್ತಿ ಮತ್ತು ಸಮಾಧಾನ ತಂದಿದೆ ಎಂದರು.

ಆಲಮಟ್ಟಿ ಅಣೆಕಟ್ಟು ಎತ್ತರ ಮಾಡುವುದರಿಂದ ಕನಿಷ್ಠ 5ರಿಂದ 6 ಲಕ್ಷ ಎಕರೆ ಭೂಮಿ ಹೆಚ್ಚಿನ ನೀರಾವರಿಗೆ ಒಳಪಡಲಿದ್ದು, ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಹಣವನ್ನು ನಿಗದಿ ಮಾಡಿ ನನ್ನ ಅಧಿಕಾರದ ಅವಧಿಯೊಳಗೆ ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್‌ಗಳಿಗೆ ಏರಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳನ್ನು ನ್ಯಾಯಮಂಡಳಿ ಎತ್ತಿಹಿಡಿದಿದೆ. ನಮ್ಮ ಸರಕಾರ ರೈತರು ಮತ್ತು ನೀರಾವರಿ ವಿಷಯಗಳಿಗೆ ಆದ್ಯತೆ ಕೊಟ್ಟಿದ್ದು, ಮುಂದೆಯೂ ಕೂಡ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡುವುದಾಗಿ ಹೇಳಿದರು.

ಕೃಷ್ಣಾ ಜಲ ನ್ಯಾಯಾಧೀಕರಣ ತೀರ್ಪು;ಕರ್ನಾಟಕಕ್ಕೆ ಜಯ
ಸಂಬಂಧಿತ ಮಾಹಿತಿ ಹುಡುಕಿ