ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಶ್ರೀಮಂತ ಗಾಲಿ ಜನಾರ್ದನ ರೆಡ್ಡಿ ಈಗ ಮರದ ಕೆಳಗಡೆ ಸ್ನಾನ (Obulapuram Mining Company | Janardhana Reddy | Chanchalguda jail | Karnataka politician)
ಅಕ್ರಮ ಗಣಿಗಾರಿಕೆ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರದಲ್ಲೂ ಶ್ರೀಮಂತರೆನಿಸಿಕೊಂಡಿದ್ದಾರೆ. ಯಾಕೆಂದರೆ ಅವರು ಚಂಚಲಗುಡ ಜೈಲು ಸೇರುವಾಗ ಅವರ ಕೈಯಲ್ಲಿ 30 ಸಾವಿರ ರೂಪಾಯಿಗಳಿದ್ದವು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಇಷ್ಟು ದೊಡ್ಡ ಮೊತ್ತವನ್ನು ಅವರು ಉಪಯೋಗಿಸುವಾಗಿಲ್ಲ. ಇದು ಜೈಲಿನ ಪಿಪಿಎ ಖಾತೆಯಲ್ಲಿ ಜಮೆಯಾಗಿದೆ. ಹೀಗಾಗಿ ಚಕ್ರಧಿಪತಿಯಾಗಿ ಮೆರೆದಿದ್ದ ರೆಡ್ಡಿ ಜೈಲಿನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.

ಮೂಲದ ಪ್ರಕಾರ ಚಂಚಲಗುಡ ಕೇಂದ್ರ ಕಾರಾಗೃಹದ ಬಯಲಿನ ಮರದ ಕೆಳಗಡೆ ನಿಂತು ಸ್ನಾನ ಮಾಡುವಂತಹ ಪರಿಸ್ಥಿತಿ ಗಾಲಿ ಜನಾರ್ದನ ರೆಡ್ಡಿಗೆ ಎದುರಾಗಿದೆ. ಅರಮನೆಯಂತಹ ಮನೆಯಲ್ಲಿ ರಾಜಾರೋಷವಾಗಿದ್ದ ರೆಡ್ಡಿ ಇದೀಗ ಮರದಡಿಯಲ್ಲಿ ನಿಂತು ಸ್ಥಾನ ಮಾಡುವಂತಾಗಿದೆ.

ರೆಡ್ಡಿ ಜತೆ ಬಂಧನರಾಗಿದ್ದ ಓಬಳಾಪುರ ಮೈನಿಂಗ್ ಕಂಪೆನಿ (ಓಎಮ್‌ಸಿ) ಆಡಳಿತ ನಿರ್ದೇಶಕ ಬಿ. ವಿ. ಶ್ರೀನಿವಾಸ್ ರೆಡ್ಡಿ ಅವರ ಬಳಿಯೂ 20 ಸಾವಿರ ರೂಪಾಯಿಗಳಿದ್ದವು. ಶ್ರೀನಿವಾಸ್ ರೆಡ್ಡಿ ಹಣವನ್ನು ಸಹ ಪಿಪಿಎ ಖಾತೆಯಲ್ಲಿಡಲಾಗಿದೆ.

ದೇಶದ ಶ್ರೀಮಂತ ರಾಜಕಾರಣಿ ಇದೀಗ ಜೈಲಿನ ಕ್ಯಾಂಟಿನ್‌ನಿಂದ ತಮಗೆ ಅಗತ್ಯದ ವಸ್ತುಗಳನ್ನು ಖರೀದಿಸಬೇಕಾಗಿದೆ. 2 ರೂ. 5 ರೂ, 10 ರೂ ಟೋಕನ್ ತೆಗೆದುಕೊಂಡು ತಮಗೆ ಬೇಕಾದ ದಿನನಿತ್ಯದ ವಸ್ತುಗಳಾದ ಟೂತ್ ಪೇಸ್ಟ್, ಟೂತ್ ಬ್ರಷ್ ಹಾಗೂ ಬಿಸ್ಕೆಟ್‌ಗಳನ್ನು ಖರೀದಿಸಬೇಕಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಅಕ್ರಮ ಗಣಿಗಾರಿಕೆ, ಓಬಳಾಪುರಂ ಮೈನಿಂಗ್ ಕಂಪೆನಿ, ಚಂಚಲಗುಡ ಕಾರಾಗೃಹ, ಶ್ರೀನಿವಾಸ್ ರೆಡ್ಡಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ