ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಸದಾನಂದಗೌಡ ದಿನಗೂಲಿ ಸಿಎಂ; ಕುಮಾರಸ್ವಾಮಿ ಲೇವಡಿ (Kumaraswamy | Sadananda Gowda | Yaddyurappa | Koppal bypoll)
ರಾಜ್ಯದ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಅವರು ದಿನಗೂಲಿ ಸಿಎಂ ಆಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ನಾಲ್ಕು ಸರಕಾರಗಳು ಆಡಳಿತ ನಡೆಸಿದ್ದು, ಈ ನಾಲ್ಕು ಸರಕಾರದ ದಿನಗೂಲಿ ಮುಖ್ಯಮಂತ್ರಿ ಸದಾನಂದಗೌಡ ಅವರಾಗಿದ್ದಾರೆ ಎಂದು ಮಾತಿನ ಅಸ್ತ್ರ ಪ್ರಯೋಗಿಸಿದ್ದಾರೆ.

ರಾಜ್ಯದಲ್ಲಿ ನಾಲ್ಕು ಸರಕಾರಗಳು ಅಸ್ಥಿತ್ವದಲ್ಲಿವೆ. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್ ಸೇರಿದಂತೆ ಪ್ರತಿ ಬಣದಿಂದಲೂ ಕಾರ್ಯ ನಿರ್ವಹಣೆ ನಡೆಯುತ್ತಿದೆ. ನಾಲ್ಕು ಬಣಗಳು ಸಹ ಪ್ರತ್ಯೇಕವಾಗಿ ಸರಕಾರ ನಡೆಸುತ್ತಿವೆ. ಸದಾನಂದ ಗೌಡರು ಕೈಗೊಂಬೆಯಾಗಿದ್ದು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಿರೀಕ್ಷೆ ಮಾಡುವಂತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅನಿವಾರ್ಯಗಳಿಂದ ಮೌನಕ್ಕೆ ಶರಣಾಗಬೇಕಾಯಿತು. ಆದರೆ ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಅವರಿಗೆಲ್ಲ ಸದ್ಯದಲ್ಲೇ ಉತ್ತರ ನೀಡಲಿದ್ದೇನೆ ಎಂದಿದ್ದಾರೆ.

ನನ್ನ ವಿರುದ್ಧದ ಷಡ್ಯಂತ್ರದ ಬಗ್ಗೆ ಜನರಿಗೆ ತಿಳಿಸ್ತೇನೆ. ನಾಳೆಯಿಂದಲೇ ಕೊಪ್ಪಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಆ ಮೂಲಕ ನನ್ನ ಹೋರಾಟ ರಾಜ್ಯಾದ್ಯಂತ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಜೆಡಿಎಸ್ ಸಾಮರ್ಥ್ಯ ಏನೆಂಬುದು ಸಾಬೀತುಪಡಿಸಲಿದ್ದೇನೆ ಎಂದಿದ್ದಾರೆ.

ಆಡ್ವಾಣಿ ಏನೊ ಒಂದು ರಥಯಾತ್ರೆ ಮಾಡ್ತಾರೋ ಅದಕ್ಕೂ ಮೊದಲು ರಾಜ್ಯದ ಭ್ರಷ್ಟಚಾರ ಮುಖ್ಯಮಂತ್ರಿ ಸದಾನಂದಗೌಡರ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕುಮಾರಸ್ವಾಮಿ ಪ್ರಶ್ನಿಸಿದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕುಮಾರಸ್ವಾಮಿ, ಸದಾನಂದಗೌಡ, ಕರ್ನಾಟಕ ಮುಖ್ಯಮಂತ್ರಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಜೆಡಿಎಸ್, ಕೊಪ್ಪಳ ಉಪಚುನಾವಣೆ, ದಿನಗೂಲಿ ಮುಖ್ಯಮಂತ್ರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ