ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ತಮ್ಮ 49ನೇ ಹುಟ್ಟುಹಬ್ಬದ ಡಬಲ್ ಧಮಾಕ. ಹೀಗೆ ಡಬಲ್ ಧಮಾಕ ಎನ್ನಲು ಕಾರಣವೂ ಇದೆ. ಜು.12ನೇ ಇಂದು ಶಿವಣ್ಣಗೆ ಹುಟ್ಟುಹಬ್ಬದ ಸಂಭ್ರಮ ಒಂದೆಡೆಯಾದರೆ ಇನ್ನೊಂದೆಡೆ ತಮ್ಮ 100ನೇ ಚಿತ್ರ ಜೋಗಯ್ಯ ಸೆಟ್ಟೇರುವ ಮುಹೂರ್ತದ ದಿನ. ಹಾಗಾಗಿ ಹುಟ್ಟುಹಬ್ಬದ ದಿನ ಶಿವಣ್ಣಗೆ ಕೋಟಿಗಟ್ಟಲೆ ಜನರೂ ನೋಡುವಂಥ ಅದ್ದೂರಿ ಸಮಾರಂಭದ ಉಡುಗೊರೆ!
ಇವೆಲ್ಲವುಗಳ ಜೊತೆಗೆ, ಜೇಮ್ಸ್ ಬಾಂಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಚಿತ್ರದ ಆಫರ್ ಕೂಡಾ ಶಿವಣ್ಣರಿಗೆ ಬಂದಿದೆ!
ಬೆಳಗ್ಗಿನಿಂದ ಶಿವಣ್ಣ ನೂರಾರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಬೆಳಗ್ಗಿನ ಜಾವವೇ ತಮ್ಮ ಮನೆ ಮುಂದೆ ನೆರೆದಿದ್ದ ಸಾವಿರಾರು ಅಭಿಮಾನಿಗಳೆಡೆಗೆ ಕೈ ಬೀಸಿ ಅವರು ಅಭಿಮಾನದಿಂದ ತಂದ ಕೇಕುಗಳನ್ನು ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.
ಮುಂದಿನ ಪುಟದಲ್ಲಿ ಮತ್ತಷ್ಟು ಫೋಟೋಗಳಿವೆ. ಕ್ಲಿಕ್ ಮಾಡಿ...