ಭಾರೀ ನೂಕುನುಗ್ಗಲು, ಲಾಠಿ ಪ್ರಹಾರ!: ಇದೇ ವೇಳೆ ಮಧ್ಯಾಹ್ನ 3.30ರ ಹೊತ್ತಿಗೆ ಶಿವಣ್ಣ ಅವರ 100ನೇ ಚಿತ್ರ ಹಾಗೂ ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣದ 'ಜೋಗಯ್ಯ' ಸೆಟ್ಟೇರಿದೆ. ದಕ್ಷಿಣದ ಮೆಗಾ ಸ್ಟಾರ್ ಚಿರಂಜೀವಿ, ತಮಿಳು ನಟರಾದ ಶಿವಣ್ಣ ಅವರ ಆಫ್ತ ಬಳಗವಾದ ವಿಜಯ್, ಸೂರ್ಯ ಮತ್ತಿತರರು ಈ ಸಮಾರಂಭದಲ್ಲಿ ಭಾಗವಹಿಸಿದ್ದುದು ವಿಶೇಷ. ಅದ್ದೂರಿ ಸಮಾರಂಭದಲ್ಲಿ ಅಭಿಮಾನಿಗಳು ತಮ್ಮ ಅನೂಕೂಲಕ್ಕೆ ತಕ್ಕಂತೆ ತಮ್ಮದೇ ರೀತಿಯಲ್ಲಿ ಸಣ್ಣಪುಟ್ಟ ಗಿಫ್ಟ್‌ಗಳನ್ನು ಹಿಡಿದು ಸಮಾರಂಭ ನಡೆಯುವ ದೃಶ್ಯ ಕಾಣುತ್ತಿತ್ತು. ಅಭಿಮಾನಿಯೊಬ್ಬರು ಶಿವಣ್ಣರಿಗೆ ಕಂಕುಳದೆಡೆಯಲ್ಲಿ ನಾಟಿಕೋಳಿಯನ್ನೇ ಹೊತ್ತು ತಂದಿದ್ದರು. ಇಂದು ಕೊಡಲಾಗದಿದ್ದರೆ ನಾಳೆ ಮನೆಗೆ ಹೋಗಿ ನಾಟಿ ಕೋಳಿ ಕೊಡ್ತೀನಿ ಅಂತಾರೆ ಈ ಅಭಿಮಾನಿ. ಆದರೆ ಭಾರೀ ಭದ್ರತೆಯ ಕಾರಣದಿಂದ ಎಷ್ಟೋ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನನ್ನು ನೋಡಲಾಗಲಿಲ್ಲ. ಚಿತ್ರರಂಗದ ಗಣ್ಯರು ಆಗಮಿಸುವ ವೇಳೆಗೆ ಭಾರೀ ನೂಕು ನುಗ್ಗಲು ಉಂಟಾಗಿ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಲಘು ಲಾಠಿ ಪ್ರಹಾರವನ್ನೂ ನಡೆಯಬೇಕಾಯಿತು.