ಅಣ್ಣನ ಹುಟ್ಟುಹಬ್ಬಕ್ಕಾಗಿ ತಮ್ಮಂದಿರಾದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ವಿಶೇಷವಾದ ಎರಡು ವಾಚುಗಳನ್ನು ಗಿಫ್ಟ್ ಆಗಿ ನೀಡಿದರು. ವಿಶೇಷವೆಂದರೆ ಶಿವಣ್ಣ ಅವರ ಮಗಳೂ ಕೂಡಾ ನೀಡಿದ್ದು ವಾಚ್! ಹೆಂಡತಿ ಗೀತಾ ಸೂಟ್ ಒಂದನ್ನು ಉಡುಗೊರೆ ನೀಡಿ, ತಮ್ಮ ಕೈಯಾರೆ ಕೇಕ್ ತಿನ್ನಿಸಿದರು. ತಮ್ಮ ಮನೆಯಲ್ಲೇ ಎದ್ದು ದೇವರಿಗೆ ನಮಿಸಿ ಪೂಜೆಯಲ್ಲಿ ಪಾಲ್ಗೊಂಡು ಮೊದಲು ಕೇಕ್ ಕತ್ತರಿಸಿದ ನಂತರ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಅವರ ಹರ್ಷದಲ್ಲಿ ತಾನೂ ಪಾಲ್ಗೊಂಡರು.