ಆಪರೇಶನ್ ಗೋಲ್ಡನ್ ಗ್ಯಾಂಗ್: ಇದೇ ವೇಳೆ ಶಿವಣ್ಣ ಅಭಿಮಾನಿಗಳಿಗೆ ಮತ್ತೊಂದು ಶುಭಸುದ್ದಿ ಬಂದಿದೆ. ಶಿವಣ್ಣ ಅವರು ಜೇಮ್ಸ್ ಬಾಂಡ್ ಅವತಾರದಲ್ಲಿ ತಮ್ಮ ಮುಂದಿನ ಚಿತ್ರದಲ್ಲಿ ಕಾಣಿಸಲಿದ್ದಾರೆ. ಶಿವಣ್ಣ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನನ್ನು ಡಾ.ರಾಜ್ ರೀತಿಯಲ್ಲೇ ಜೇಮ್ಸ್ ಬಾಂಡ್ ಅವತಾರದಲ್ಲಿ ನೋಡುವ ಆಸೆಯಿತ್ತು. ಇದೀಗ ಆ ಕನಸು ನನಸಾಗಲಿದೆ. ಡಾ.ರಾಜ್ ಕುಮಾರು ಬಾಂಡ್ ಅವತಾರದಲ್ಲಿ ಜೇಡರ ಬಲೆ, ಆಪರೇಶನ್ ಜಾಕ್‌ಪಾಟ್ ಹಾಗೂ ಆಪರೇಶನ್ ಡೈಮಂಡ್ ರಾಕೆಟ್ ಎಂಬ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶಿವಣ್ಣ ಇದೀಗ ಆಪರೇಶನ್ ಗೋಲ್ಡನ್ ಗ್ಯಾಂಗ್ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ!