ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಶಿವಣ್ಣ, ಒಬ್ಬ ನಟನಿಗೆ ಅಭಿಮಾನಿಗಳಿಗಿಂತ ದೊಡ್ಡವರಿಲ್ಲ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬ ನನಗೆ ಹೊಸತೊಂದು ಸಂತೋಷ, ಖುಷಿಯನ್ನು ತರುತ್ತದೆ. ಈ ಬಾರಿಯೂ ನನ್ನ ಅಭಿಮಾನಿಗಳು ನನ್ನಲ್ಲಿ ಈ ಸಂತೋಷ ನೂರ್ಮಡಿಸುವಂತೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ನನ್ನ ಮನೆಯೆದುರು ನೆರೆದಿದ್ದ ಅಭಿಮಾನಿಗಳು ಮಳೆ ಬಂದರೂ ಜಗ್ಗದೆ, ಬೆಳಿಗ್ಗೆ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದರು. ಇಂಥ ಸಂದರ್ಭದಲ್ಲೆಲ್ಲ ನನಗೆ ನನ್ನ ಅಪ್ಪ ರಾಜ್ ಕುಮಾರ್ ನೆನಪಾಗುತ್ತಾರೆ. ಅವರಿಗೆ ಮಿಲಿಯಗಟ್ಟಲೆ ಅಭಿಮಾನಿಗಳ ಶುಭ ಹಾರೈಕೆಯೇ ಆಶಿರ್ವಾದವಾಗಿತ್ತು. ಇಂದು ಅದೇ ಮಟ್ಟದ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಿರುವುದು, ನನ್ನ ಅಭಿಮಾನಿಗಳಾಗಿರುವುದು ನನಗೆ ಅಪೂರ್ವ ಕ್ಷಣವಲ್ಲದೆ ಮತ್ತಿನ್ನೇನು ಎಂದರು ಶಿವಣ್ಣ.