ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 2010ರ ಜನ-ಮನ ಗೆದ್ದ 10 ಕನ್ನಡ ಚಿತ್ರಗಳು ಯಾವುವು? (Top 10 Kannada films 2010 | Super | Jackie | Aptarakshaka)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗದ ಪಾಲಿಗೆ 2010ರ ವರ್ಷ ಭರ್ಜರಿ ಹಿಟ್ ಸಿನಿಮಾಗಳನ್ನು ನೀಡಿದೆ. ಅತ್ಯುತ್ತಮವಾಗಿದ್ದ ಬಹುತೇಕ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆದ್ದಿವೆ. ಎಂದಿನಂತೆ ಜೊಳ್ಳು ಚಿತ್ರಗಳಿಗೆ ಈ ಬಾರಿಯೂ ಕೊರತೆಯಿರಲಿಲ್ಲ.

ಚಿತ್ರರಂಗದ ಗಂಧಗಾಳಿ ಇಲ್ಲದವರು ಚಿತ್ರ ನಿರ್ಮಾಣಕ್ಕಿಳಿದುದು, ಎಲ್ಲೋ ಮಾಡಿದ ಸಂಪಾದನೆಯನ್ನು ಏನೋ ಮಾಡುವ ಉದ್ದೇಶದಿಂದ ಸುರಿದವರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇವರೆಲ್ಲರ ಕಾರಣಗಳಿಂದ ಕನ್ನಡದಲ್ಲಿ ಈ ವರ್ಷ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ ಡಿಸೆಂಬರ್ 23ರವರೆಗೆ 130. ಇನ್ನೂ ಕೆಲ ಚಿತ್ರಗಳು ಈ ವರ್ಷ ಇದಕ್ಕೆ ಸೇರ್ಪಡೆಯಾಗಲಿವೆ.

ಈ ಬಾರಿಯೂ ಸಾಕಷ್ಟು ಹೊಡಿ-ಬಡಿ ಚಿತ್ರಗಳಿದ್ದವು. ಆದರೆ ಈ ವಿಭಾಗದಲ್ಲಿ ಗೆದ್ದಿರುವ ಚಿತ್ರಗಳು ಮಾತ್ರ ಕಡಿಮೆ. ನವಿರು ಭಾವನೆಗಳು, ಪ್ರೇಮ, ಹಾಸ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತ ಸಿನಿಮಾಗಳಿಗೆ ಪ್ರೇಕ್ಷಕ ಮಹಾಶಯ ಜೈ ಎಂದಿದ್ದಾನೆ.

ಇವೆಲ್ಲವನ್ನೂ ಮೀರಿಸುವ ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಅಂಶ - ಈ ಬಾರಿ ಸ್ವಮೇಕ್ ಚಿತ್ರಗಳು ಜಯಭೇರಿ ಬಾರಿಸಿರುವುದು. ಒಂದೇ ಒಂದು ರಿಮೇಕ್ ಚಿತ್ರ 2010ರ ಇಡೀ ವರ್ಷದಲ್ಲಿ ಸೂಪರ್ ಹಿಟ್ ಆಗಿಲ್ಲ. ಹಾಗಾಗಿ ನಿರ್ಮಾಪಕರು ರಿಮೇಕ್ ಬೇಡ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವನ್ನು ಕಾಲವೇ ನೀಡಿದೆ.

ಈ ವರ್ಷ ಒಟ್ಟಾರೆ ಸುಮಾರು 25ರಷ್ಟು ಚಿತ್ರಗಳಷ್ಟೇ ನಿರ್ಮಾಪಕರ ಜೇಬನ್ನು ತುಂಬಿಸಿವೆ. ಕೆಲ ಉತ್ತಮ ಚಿತ್ರಗಳೂ ಫ್ಲಾಪ್ ಆಗಿವೆ. ಆದರೂ ಅವುಗಳು ಜನ ಮೆಚ್ಚುಗೆ ಪಡೆದಿವೆ. ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುವ ಹಲವು ನಾಯಕರು ಈ ಬಾರಿ ಸುದ್ದಿಯನ್ನೇ ಮಾಡಿಲ್ಲ.

ಕಥೆ, ಚಿತ್ರಕಥೆ, ನಿರ್ದೇಶನ, ನಟನೆ, ಹಾಡುಗಳು, ಸಾಹಿತ್ಯ, ಬಾಕ್ಸಾಫೀಸ್ ಫಲಿತಾಂಶ ಮುಂತಾದುವುಗಳನ್ನು ಆಧರಿಸಿ 2010ರ ಟಾಪ್ 10 ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಸೋತ ಅತ್ಯುತ್ತಮ ಚಿತ್ರಗಳೂ ಟಾಪ್ 10ನಲ್ಲಿ ಕಾಣಿಸಿಕೊಂಡಿವೆ. ಹೇಳಲೇಬೇಕಾದ ಮತ್ತೊಂದು ವಿಚಾರವೆಂದರೆ, ಇಲ್ಲಿ ಸ್ವಮೇಕ್ ಚಿತ್ರಗಳಿಗೆ ಮಾತ್ರ ಸ್ಥಾನ ನೀಡಲಾಗಿರುವುದು!

ಮುಂದಿನ ಪುಟಗಳಲ್ಲಿ ಟಾಪ್-10 ಚಿತ್ರಗಳನ್ನು ನೋಡಿ, ಈ ಕುರಿತು ನಿಮ್ಮ ಅಭಿಪ್ರಾಯ ಏನು? ನಿಮ್ಮ ಪ್ರಕಾರ 2010ರ ಉನ್ನತ ಚಿತ್ರಗಳು ಯಾವುವು ಎಂದು ಪ್ರತಿಕ್ರಿಯಿಸಿ?

ಟಾಪ್ 10 ಚಿತ್ರಗಳು ಯಾವುವು ಎಂಬುದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 2010ರ ಅಗ್ರ 10 ಕನ್ನಡ ಸಿನಿಮಾಗಳು, ಸೂಪರ್, ಜಾಕಿ, ಆಪ್ತರಕ್ಷಕ