ತಾನು ಮಾಮೂಲಿ ನಿರ್ದೇಶಕ ಎಂದು ಮೂಗು ಮುರಿಯುವುದನ್ನು ಬಿಡಿ ಎಂದು ಕಿಚ್ಚ ಸುದೀಪ್ ಗಾಂಧಿನಗರಕ್ಕೆ ಸಾರಿ ಹೇಳಿದ ಚಿತ್ರವಿದು. ಸುದೀಪ್-ರಮ್ಯಾ ಹಿಟ್ ಕಾಂಬಿನೇಷನ್, ಕಥೆ ಹೇಳುತ್ತಾ ಚಿತ್ರವನ್ನು ನೋಡಿಸಿಕೊಂಡು ಹೋಗುವ ಶೈಲಿ, ಭಾವನೆಗಳಿಗೆ ಹೆಚ್ಚು ಒತ್ತು ಕೊಟ್ಟು ವಿಮರ್ಶಕರಿಂದ ಬೆನ್ನು ತಟ್ಟಿಸಿಕೊಂಡರೂ ನಿರ್ಮಾಪಕರ ಜೇಬು ತುಂಬಿಸಲು ಚಿತ್ರ ವಿಫಲವಾಯಿತು. ಇದು ಪ್ರಸಕ್ತ ಹಿಂದಿಗೆ ರಿಮೇಕ್ ಆಗುತ್ತಿದೆ.