ಭಟ್ಟರ ಗರಡಿಯಿಂದ ಹೊರಗಡೆ ದಿಗಂತ್ ತಾನೊಬ್ಬ ಯಶಸ್ವಿ ನಟ ಎಂದು ತೋರಿಸಲು ಸಾಧ್ಯವಾದ ಈ ಚಿತ್ರವನ್ನು ನಿರ್ದೇಶಿಸಿದ್ದು ಸಂದೀಪ್ ಗೌಡ. ಜೆನ್ನಿಫರ್ ಕೊತ್ವಾಲ್ ಈ ಚಿತ್ರದಲ್ಲಿ ನಾಯಕಿ. ಮಾಮೂಲಿ ಪ್ರೇಮಕಥೆಗಳಂತೆ ಕಂಡರೂ, ಕಥೆ ಮತ್ತು ನಿರೂಪನೆ ದೃಷ್ಟಿಯಿಂದ ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೂ ಪ್ರಚಾರದ ಕೊರತೆಯಿಂದ ಚಿತ್ರ ನಿರೀಕ್ಷಿತ ಯಶಸ್ಸನ್ನು ಪಡೆದಿಲ್ಲ.