ಸಮಾನ ಮನಸ್ಕ ಪಕ್ಷಗಳು ಸೇರಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಪರ್ಯಾಯವಾಗಿ ರಾಷ್ಟ್ರದಲ್ಲಿ 'ತೃತೀಯ ಶಕ್ತಿ'ಯೊಂದನ್ನು ಹುಟ್ಟು ಹಾಕಿವೆ. ಇದೀಗ ಈ ತೃತೀಯ ರಂಗಕ್ಕೆ ಸೂಕ್ತವಾದ ಹೆಸರೊಂದು ಬೇಕಾಗಿದೆ. ಕಾರಣ ತೃತೀಯ ರಂಗದ ನಾಯಕರಿಗ್ಯಾಕೋ ಈ ಹೆಸರು ಪಸಂದ ಅನಿಸುತ್ತಿಲ್ಲ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ತೃತೀಯ ರಂಗದ ಮಿತ್ರಪಕ್ಷಗಳಿಗೆ ನೀಡಿದ ಔತಣ ಕೂಟ ಮತ್ತು ಬಿಜೆಡಿ ಮತ್ತು ಬಾಬುಲಾಲ್ ಮರಾಂಡಿ ಅವರು ತೃತೀಯ ರಂಗಕ್ಕೆ ಸೇರುಲು ಇಚ್ಛೆ ವ್ಯಪಡಿಸಿದ ಬಳಿಕ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಮಿತ್ರಕೂಟಕ್ಕೆ ಹೊಸಹೆಸರನ್ನಿರಿಸುವ ಕುರಿತು ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ದಾರೆ.
"ತೃತೀಯ ರಂಗ ಎಂಬ ಹೆಸರಿನ ಕುರಿತು ಹೆಚ್ಚಿನವರಿಗೆ ಸಮಾಧಾನ ಇಲ್ಲದ ಕಾರಣ ಹೊಸ ಹೆಸರನ್ನಿರಿಸಬೇಕು ಎಂಬುದಾಗಿ ಕಾರಟ್ ಹೇಳಿದ್ದಾರೆ. ಅವರು ನಿರ್ಧರಿಸುವ ಯಾವುದೇ ಹೆಸರಿಗೆ ನನ್ನ ಒಪ್ಪಿಗೆ ಇದೆ" ಎಂದು ದೇವೇ ಹೌಡರು ಹೇಳಿದ್ದಾರೆ.