ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ
ಮತಸಮರ
ವರುಣ್ ಗಾಂಧಿಯ ಉದ್ರೇಕಕಾರಿ ಭಾಷಣದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗವು ಆದೇಶಿಸಿರುವ ಬಳಿಕ, ಅವರು 'ಷರತ್ತುಬದ್ಧ ಕ್ಷಮೆ' ಯಾಚಿಸುವುದಾಗಿ ಹೇಳಿದ್ದಾರೆ.

ತನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ತಾನು ಯಾವುದೇ ಕೋಮುವಾದಿ ಅಥವಾ ವಿಭಜನಕಾರಿ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದ ವರುಣ್, ತಾನು ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಮಾತನಾಡಿದ್ದೇನೆಯೇ ವಿನಹ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಹೇಳಿದ್ದಾರೆ.

"ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ" ಎಂಬುದಾಗಿ ಅವರ ಪರವಾಗಿ, ಅವರ ಪತ್ರಿಕಾ ಕಾರ್ಯದರ್ಶಿ ಆನಂದ್ ಚೌಧರಿ ನೀಡಿರುವ ಹೇಳಿಕೆಯಲ್ಲಿ ಮಂಡಿಸಲಾಗಿದೆ.

ಚುನಾವಣಾ ಸಭೆಯಲ್ಲಿ ದಾಖಲಿಸಲಾದುವು ಎಂಬುದಾಗಿ ಸುದ್ದಿವಾಹಿನಿಗಳು ಬಿತ್ತರಿಸಿರುವ ಎರಡು ಭಾಷಣಗಳು ತನ್ನ ಧ್ವನಿಯೂ ಅಲ್ಲ ಮತ್ತು ಅದು ತನ್ನ ಭಾಷೆಯೂ ಅಲ್ಲ ಎಂಬುದಾಗಿ ಅವರು ತನ್ನ ಹೇಳಿಕೆಯಲ್ಲಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

"ದೂರದಿಂದ ಚಿತ್ರೀಕರಿಸಿರುವ ದೃಶ್ಯಕ್ಕೆ ತಿರುಚಿದ ಭಾಷಣವನ್ನು ಅಳವಡಿಸಿದಂತಿದೆ ಮತ್ತು ವೀಡಿಯೋ ತುಣುಕು ಅತ್ಯಂತ ಕಳಪೆಯಾಗಿದೆ ಮತ್ತು ಕೆಲವು ವಾಸ್ತವಗಳನ್ನು ತಿರುಚಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಅನಧಿಕೃತ ಸಿಡಿಗಳು ಪ್ರತಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದು ರಾಜಕೀಯ ಲಾಭಕ್ಕಾಗಿ ಕೆಲವು ಭ್ರಮನಿಸನಗೊಂಡಿರುವ ವಿರೋಧಿಗಳು ಮಾಡಿರುವ ಕೃತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

"ರಾಷ್ಟ್ರೀಯ ಇತಿಹಾಸದ ಭಾಗವಾಗಿರುವ ಕುಟುಂಬದಿಂದ ಬಂದಿರುವ ನನಗೆ ನನ್ನ ಜವಾಬ್ದಾರಿಯ ಕುರಿತು ಸಂಪೂರ್ಣ ಅರಿವಿದೆ. ಅಲ್ಲದೆ ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುವ ಏನನ್ನೂ ತಾನು ಮಾಡಲಾರೆ. ವಿರೋಧಿಗಳು ತನ್ನ ಚೊಚ್ಚಲ ಚುನಾವಣಾ ಪ್ರಚಾರವನ್ನು ಕೆಡಿಸಲು ಆಡಿರುವ ಆಟವಿದು ಎಂಬುದನ್ನು ರಾಷ್ಟ್ರದ ಜನತೆ ತಿಳಿಯಲಿದ್ದಾರೆ ಎಂಬುದಾಗಿ ವರುಣ್ ಹೇಳಿದ್ದಾರೆ.