ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬೆಂಗ್ಳೂರಿಗೂ ಬರ್ತಿದೆ ಡಬಲ್ ಡೆಕರ್ ಬಸ್ ರೆಸ್ಟಾರೆಂಟ್!
(Hijackk | Moving Restaurant in Chennai | Double Decker Hotel | Moist Clay)
ಅವಿನಾಶ್ ಬಿ. ಉತ್ತರದ ಅಹಮದಾಬಾದ್, ಸೂರತ್ ಬಳಿಕ ಇದೀಗ ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಡಬಲ್ ಡೆಕರ್, ಗಾಲಿಗಳ ಮೇಲಿನ ಸಂಚಾರಿ ರೆಸ್ಟೋರೆಂಟ್ ಚೆನ್ನೈಗೆ ಬಂದಿದ್ದು, ಕೆಲವೇ ತಿಂಗಳಲ್ಲಿ ಬೆಂಗಳೂರಿಗರನ್ನೂ ಹೈಜಾಕ್ ಮಾಡಲಿದೆ!
ಹೌದು, ಈ ಸಂಚಾರಿ ಡಬಲ್ ಡೆಕರ್ ಬಸ್ ಹೆಸರೇ 'ಹೈಜಾಕ್'. ನೀವು ಯಾರಿಗಾದರೂ ನಿಮ್ಮ ಬರ್ತ್‌ಡೇ ಪಾರ್ಟಿ ಕೊಡಿಸಬೇಕೆಂದಿದ್ದರೆ, ಮರೆತುಹೋದ ಬಾಕಿ ಪಾರ್ಟಿಗಳನ್ನೆಲ್ಲಾ ನೀಡಬೇಕೆಂದಿದ್ದರೆ, ಅವರೆಲ್ಲರನ್ನೂ ಒಂದು ಬಸ್ ಹತ್ತಿಸಿ, ಊರು ಸುತ್ತಲೆಂದು ಕರೆದುಕೊಂಡು ಹೋಗಿ ಹೊಟ್ಟೆಯನ್ನೂ ತುಂಬಿಸಿಬಿಡಬಹುದು! ಕಾರ್ಪೊರೇಟ್ ಕಂಪನಿಗಳೂ ಈ ಮಾದರಿಯ ಪಾರ್ಟಿಗಳನ್ನು ನೀಡಿ, ತಮ್ಮ ಉದ್ಯೋಗಿಗಳನ್ನು ತೃಪ್ತಿಪಡಿಸಬಹುದಾಗಿದೆ.