ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬೆಂಗ್ಳೂರಿಗೂ ಬರ್ತಿದೆ ಡಬಲ್ ಡೆಕರ್ ಬಸ್ ರೆಸ್ಟಾರೆಂಟ್!
(Hijackk | Moving Restaurant in Chennai | Double Decker Hotel | Moist Clay)
ಇದು ಹೇಗೆ ಕೆಲಸ ಮಾಡುತ್ತದೆ... ಸದ್ಯಕ್ಕೆ ಅಹಮದಾಬಾದ್ ಮತ್ತು ವಜ್ರದ ನಗರಿ ಸೂರತ್‌ನಲ್ಲಿ ಇದು ಯಶಸ್ವಿಯಾಗಿ ಓಡಾಡುತ್ತಿದೆ. ಇದು ಮಾಮೂಲಿ ಹೋಟೆಲ್ ಇದ್ದಂತೆಯೇ. ಆದರೆ ಒಂದು ನಿಗದಿತ ಸ್ಥಳದಿಂದ ಇನ್ನೊಂದಕ್ಕೆ ಹೋಗಿ ಬರುತ್ತಿರುತ್ತದೆ. ಮಧ್ಯೆ ಮಧ್ಯೆ ನಿಗದಿತ ಮೆನು ಪ್ರಕಾರ ನಿಮಗೆ ಊಟೋಪಚಾರ ಸಾಗುತ್ತಿರುತ್ತದೆ. ಇದು ಅನ್‌ಲಿಮಿಟೆಡ್. ಪ್ಯೂರ್ ವೆಜಿಟೇರಿಯನ್ನು 9 ಬಗೆಯ ಖಾದ್ಯಗಳು. ನಾನು(ನ್) ವೆಜಿಟೇರಿಯನ್ನು ಅಂದ್ರಾ??!
ಇಲ್ಲಿ, ಸೂಪ್, ಸ್ಟಾರ್ಟರ್‌ಗಳು, ಸಲಾಡ್, ಮುಖ್ಯ ಖಾದ್ಯ, ಡೆಝರ್ಟ್ ಮತ್ತು ರೀಫ್ರೆಶ್‌ಮೆಂಟ್ - ಈ ವಿಭಾಗಗಳಡಿ 9 ಖಾದ್ಯಗಳು ನಿಮಗೆ ಲಭ್ಯ. ಆದರೆ ಐಷಾರಾಮಿ ಹೋಟೆಲುಗಳಲ್ಲಿರುವಂತೆ ಮದ್ಯ ಸರಬರಾಜು ಇಲ್ಲವೇ ಇಲ್ಲ. ಯಾಕೆಂದರೆ ಬಸ್ಸುಗಳಲ್ಲಿ ಕುಡಿಯುವುದು ಅಪರಾಧವಲ್ಲವೇ?
ಬಸ್‌ನೊಳಗಿರುವ ಮೆನು ಪ್ರತೀ 15 ದಿನಗಳಿಗೊಮ್ಮೆ ಬದಲಾಗುತ್ತಿರುತ್ತದೆ. ಯಾಕೆಂದರೆ ಒಮ್ಮೆ ಬಂದವರು ಮತ್ತೊಮ್ಮೆ ಬರಬೇಕಿದ್ದರೆ ಬದಲಾವಣೆ ಬಯಸುತ್ತಾರಲ್ಲವೇ? ಪ್ರತಿ ಸಂಜೆ ಎರಡು ಬಾರಿ (7 ಗಂಟೆ ಮತ್ತು 8.45ಕ್ಕೆ ) ಸುಮಾರು 25-30 ಕಿ.ಮೀ. ಪ್ರಯಾಣಿಸುವ ಈ ಬಸ್ಸು ಮರಳಿ ಬರುವ ಹೊತ್ತಿಗೆ ನಿಮ್ಮ ಊಟವೂ ಮುಗಿದಿರುತ್ತದೆ. ಹಾಗಿದ್ದರೆ, ಅಲುಗಾಟ-ಕುಲುಕಾಟ ಇದ್ದರೆ ನೀರೆಲ್ಲಾ ಚೆಲ್ಲಬಹುದೇ? ಅದಕ್ಕೂ ತಕ್ಕ ವ್ಯವಸ್ಥೆ ಇದೆ. ಇದು ಕೇವಲ ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂಬುದು ಒಂದು ಸಂಗತಿಯಾದರೆ, ಹೊಂಡ-ಕುಳಿಗಳಿಲ್ಲದ, ರಸ್ತೆ ಉಬ್ಬುಗಳಿಲ್ಲದ ರಸ್ತೆಗಳನ್ನೇ ಈ ಪ್ರಯಾಣಕ್ಕೆ ಆರಿಸಿಕೊಳ್ಳಲಾಗುತ್ತದೆ. ನೈಸಾಗಿ ಇರುವ ನೈಸ್ ರಸ್ತೆ ನೆನಪಿಸಿಕೊಳ್ಳಿ!