ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಬೆಂಗ್ಳೂರಿಗೂ ಬರ್ತಿದೆ ಡಬಲ್ ಡೆಕರ್ ಬಸ್ ರೆಸ್ಟಾರೆಂಟ್! (Hijackk | Moving Restaurant in Chennai | Double Decker Hotel | Moist Clay)
Bookmark and Share Feedback Print
 
WD

ಆಹಾರ ಎಲ್ಲಿಂದ?
ಗುಜರಾತಿನ ಸೂರತ್ ಮತ್ತು ಅಹಮದಾಬಾದ್‌ಗಳಲ್ಲಿ 9 ತಿಂಗಳ ಹಿಂದೆ ಇಂತಹಾ ಒಂದು ಬಸ್ ಆರಂಭವಾಗಿ, ಪ್ರತಿದಿನ ಮೂರು ಟ್ರಿಪ್ ನಡೆಸುತ್ತಿದೆ. ಒಂದು ಟ್ರಿಪ್‌ನಲ್ಲಿ 42 ಮಂದಿ ಊಟ ಮಾಡಬಹುದಾಗಿದೆ. ಅಂದರೆ ಮೇಲೆ 21 ಮಂದಿ, ಕೆಳಗೆ 21 ಮಂದಿ. ಇದರಲ್ಲಿ ಸರಬರಾದು ಮಾಡುವ ಆಹಾರವನ್ನು ತಯಾರಿಸುವ ಅವರದೇ ಆದ ತಂಡವಿದೆ. ಸದ್ಯಕ್ಕೆ ಚೆನ್ನೈಯಲ್ಲಿ ಪ್ರಾರಂಭವಾಗಿರುವ ಈ ಬಸ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಹೊರಗಿನ ದೊಡ್ಡ ಹೋಟೆಲ್‌ನಿಂದ ಖರೀದಿಸಲಾಗುತ್ತದೆ. ಯಾಕೆಂದರೆ, ಚೆನ್ನೈ ಮಂದಿಯ ಬಾಯಿ ರುಚಿಯೇ ಬೇರೆ!

ಹಾಗಿದ್ದರೆ, ರೇಟೆಷ್ಟು?
ಇದು ಮೂಲಭೂತ ಪ್ರಶ್ನೆ. ಆವಾಗಿನಿಂದ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಕಾಡುತ್ತಲೇ ಇದ್ದ ಪ್ರಶ್ನೆಯಲ್ಲವೇ. ಕೇಳಿ. ಚೆನ್ನೈಯಲ್ಲಿ ರೇಟು ಒಂದು ತಲೆಗೆ 565 ರೂಪಾಯಿ. ಜಾಸ್ತಿಯಾಯಿತೇ? ಇದನ್ನು ನಾವು ಆಯೋಜಕರಲ್ಲಿ ಕೇಳಿದಾಗ ಅವರಿಂದ ಬಂದ ಉತ್ತರ, ಐಷಾರಾಮಿ ಹೋಟೆಲ್ ದರ ಮತ್ತು ಪ್ರಯಾಣದ ಅನುಭವ ಎಂಬುದು ನಮ್ಮ ಹೆಚ್ಚುಗಾರಿಕೆ. ಮತ್ತು ಪ್ರದೇಶಕ್ಕೆ ತಕ್ಕಂತೆ ಚೆನ್ನೈಯಲ್ಲಿ ಆಹಾರ ವಸ್ತುಗಳು ಒಂದಿಷ್ಟು ಕಾಸ್ಟ್ಲೀ. ಹೀಗಾಗಿ ಈ ರೇಟು. ಆದರೆ ಅಹಮದಾಬಾದಿನಲ್ಲಿ ಊಟದ ಬೆಲೆ 365 ರೂಪಾಯಿ ಇದ್ದರೆ, ಸೂರತ್‌ನಲ್ಲಿ ಇದರ ಬೆಲೆ 475 ರೂಪಾಯಿ. ಬೆಂಗಳೂರಿನಲ್ಲಿ ಎಷ್ಟಿರಬಹುದು? ಕಾದು ನೋಡಿ!

ಬುಕ್ ಮಾಡೋದು ಹೇಗೆ? ಮುಂದಿನ ಪುಟಕ್ಕೆ ಇಲ್ಲಿ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ