ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈಗ ಫೆರ್ನಾಂಡಿಸ್ ಮಂಚ, ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ! (George Fernandes | Leila Kabir | Jaya Jaitley | Mangalore)
Bookmark and Share Feedback Print
 
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್‌ಗಾಗಿನ ಜಗಳ ಮುಗಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತೀಚೆಗಷ್ಟೇ ಈ ಮಂಗಳೂರಿಗನ ಹುಟ್ಟುಹಬ್ಬದಲ್ಲೂ ಕಿತ್ತಾಡಿಕೊಂಡಿದ್ದ ಅವರ ಪರಿತ್ಯಕ್ತ ಪತ್ನಿ ಲೈಲಾ ಕಬೀರ್ ಮತ್ತು ಆಪ್ತ ಸ್ನೇಹಿತೆ ಜಯಾ ಜೇಟ್ಲಿ ಇದೀಗ ಮನೆಯಲ್ಲಿನ ಪೀಠೋಪಕರಣಗಳಿಗಾಗಿ ಬೀದಿಗಿಳಿದಿದ್ದಾರೆ.

ಅಲ್ಜಿಮೀರ್ ಖಾಯಿಲೆಯಿಂದ ಸ್ಮರಣಶಕ್ತಿಯನ್ನೇ ಕಳೆದುಕೊಂಡಿರುವ ಒಂದು ಕಾಲದ ವರ್ಣರಂಜಿತ ಹಾಗೂ ಜನಪ್ರಿಯ ರಾಜಕಾರಣಿ ಫೆರ್ನಾಂಡಿಸ್‌ಗೆ ಇದ್ಯಾವುದೂ ತಿಳಿಯುತ್ತಿಲ್ಲ. ಆದರೆ ಅವರಿಗೆ ಸಂಬಂಧಪಟ್ಟ ಇಬ್ಬರು ಮಹಿಳೆಯರು ಮಾತ್ರ ಪ್ರತಿಷ್ಠೆಯ ಕಣಕ್ಕೆ ಬಿದ್ದು ಫೆರ್ನಾಂಡಿಸ್ ಘನತೆಯನ್ನು ಬೀದಿ ಪಾಲು ಮಾಡುತ್ತಿದ್ದಾರೆ.

ದೆಹಲಿಯ ನಂ.3 ಕೃಷ್ಣ ಮೆನನ್ ಮಾರ್ಗ್ ಸರಕಾರಿ ಬಂಗಲೆಯಲ್ಲಿರುವ ಕುರ್ಚಿ, ಮಂಚ ಸೇರಿದಂತೆ ಎಲ್ಲಾ ಪೀಠೋಪಕರಣಗಳು ನನಗೆ ಸೇರಿದ್ದು ಎಂದು ಹೇಳುತ್ತಿರುವ ಜಯಾ ಜೇಟ್ಲಿ, ಅದನ್ನು ಕೊಂಡು ಹೋಗಲು ನನಗೆ ಅವಕಾಶ ನೀಡಬೇಕು ಎಂದು ಹೇಳುವ ಮೂಲಕ ಇಬ್ಬರ ಜಗಳ ಮತ್ತೊಂದು ಮಜಲಿಗೆ ತಲುಪಿದೆ.

ಆ ಮನೆಗೆ ನನ್ನನ್ನು ಹೋಗಲು ಅವಕಾಶ ನೀಡುತ್ತಿಲ್ಲ. ನನ್ನ ಸಿಬ್ಬಂದಿ ಅಥವಾ ಜಾರ್ಜ್ ಅವರ ಸಹೋದರನನ್ನೂ ಮನೆಗೆ ಸೇರಿಸುತ್ತಿಲ್ಲ. ಅಲ್ಲಿರುವ ನನಗೆ ಸೇರಿದ ವಸ್ತುಗಳನ್ನು ಹೇಗೆ ವಶಕ್ಕೆ ತೆಗೆದುಕೊಳ್ಳಲಿ ಎಂದು ಜೇಟ್ಲಿ ಪ್ರಶ್ನಿಸುತ್ತಾರೆ.

ಆದರೆ ಇದನ್ನು ಲೈಲಾ ಒಪ್ಪಿಕೊಳ್ಳಲು ತಯಾರಿಲ್ಲ. ಜಾರ್ಜ್ ಬಂಗಲೆ ಪ್ರವೇಶಿಸಲು ಜೇಟ್ಲಿಗೆ ಯಾವುದೇ ಹಕ್ಕು ಇಲ್ಲ. ಆಕೆಯನ್ನು ಮನೆಗೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲಿರುವ ವಸ್ತುಗಳು ಆಕೆಗೆ ಸೇರಿದ್ದಲ್ಲ ಎಂದು ಲೈಲಾ ವಾದಿಸುತ್ತಿದ್ದಾರೆ.

ಹಾಗಾಗಿ ಇದೀಗ ಜೇಟ್ಲಿ ಅತಿಕ್ರಮ ಪ್ರವೇಶಗೈಯಲು ನಿರ್ಧರಿಸಿದ್ದಾರೆ. ಮನೆಗೆ ಹೋಗಲು ಅವಕಾಶ ನೀಡಬೇಕೆಂಬ ಮನವಿಗೆ ಪೊಲೀಸರೂ ಅನುಮತಿ ನಿರಾಕರಿಸಿರುವುದರಿಂದ ಮನೆಯ ಹೊರಗಡೆ ಫೆರ್ನಾಂಡಿಸ್ ಸಹೋದರರಾದ ರಿಚರ್ಡ್ ಫೆರ್ನಾಂಡಿಸ್ ಮತ್ತು ಮೈಕೆಲ್ ಫೆರ್ನಾಂಡಿಸ್ ಕೂಡ ಧರಣಿ ನಡೆಸಲು ಸಿದ್ಧರಾಗುತ್ತಿದ್ದಾರೆ.

ಪ್ರಸಕ್ತ ತೀರಾ ಅನಾರೋಗ್ಯ ಸ್ಥಿತಿಯಲ್ಲಿರುವ 80ರ ಹರೆಯದ ಮಾಜಿ ಸಚಿವ ಪತ್ನಿಯೊಂದಿಗೆ ದಕ್ಷಿಣ ದೆಹಲಿಯ ಖಾಸಗಿ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಅವರ ರಾಜ್ಯಸಭಾ ಸದಸ್ಯತ್ವ ಇದೇ ಜುಲೈ 7ಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ 20 ವರ್ಷಗಳಿಂದ ಸರಕಾರಿ ಬಂಗಲೆ ಹೊಂದಿರುವ ಜಾರ್ಜ್ ವಸ್ತುಗಳನ್ನು ಅಲ್ಲಿಂದ ಲೈಲಾ ತನ್ನ ಮನೆಗೆ ಸಾಗಿಸುವ ಸಿದ್ಧತೆಯಲ್ಲಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು:
** ಎಲ್ಲಾ ಕಳಕೊಂಡ ಫೆರ್ನಾಂಡಿಸ್ ಹುಟ್ಟುಹಬ್ಬದಲ್ಲೂ ಕೋಳಿಜಗಳ
** ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ನಾಪತ್ತೆಯಾಗಿದ್ದಾರೆ!
** ಫೆರ್ನಾಂಡಿಸ್‌ಗೆ ರಾಮದೇವ್ ಚಿಕಿತ್ಸೆ, ಜತೆಗೆ ಆಸ್ತಿಗಾಗಿ ಕಿತ್ತಾಟ
ಸಂಬಂಧಿತ ಮಾಹಿತಿ ಹುಡುಕಿ