ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಸಚಿವರಿಗಿಲ್ಲ ಜಾಮೀನು; ಯಾವುದೇ ಕ್ಷಣದಲ್ಲಿ ಸೆರೆ (CBI | Amit Shah | Gujarat | Sohrabuddin Sheikh)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನರೇಂದ್ರ ಮೋದಿಯವರ ಗುಜರಾತ್ ಬಿಜೆಪಿ ಸರಕಾರದ ಗೃಹ ಸಚಿವ ಅಮಿತ್ ಶಾಹ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದ್ದು, ಸಿಬಿಐ ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳಿವೆ.

ಅಹಮದಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಚಿವರಿಗೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಅವರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಸಾಧ್ಯವಿಲ್ಲ ಎಂದು ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ.
PTI

ಇದರ ಬೆನ್ನಿಗೆ ಸಿಬಿಐ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಪಟ್ಟಿ ಸಲ್ಲಿಸಿರುವ ತನಿಖಾ ದಳ, ಅದರಲ್ಲಿ ಕೊಲೆ ಆರೋಪದ ಮೇಲೆ ಸಚಿವ ಅಮಿತ್ ಹೆಸರನ್ನೂ ಸೇರಿಸಿದೆ.

ಅಮಿತ್ ಅವರ ಮೇಲೆ ಕೊಲೆ, ಅಪಹರಣ, ಸಾಕ್ಷ್ಯಗಳ ನಾಶ ಮುಂತಾದ ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಗಿದೆ. ಹಾಗಾಗಿ ಅವರನ್ನು ಬಂಧಿಸಲು ಸಿಬಿಐ ತಂಡ ಹೊರಟಿದೆ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ.

ಸಿಬಿಐ ದುರ್ಬಳಕೆ ಮಾಡಿಕೊಂಡಿಲ್ಲ...
ಹೀಗೆಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹೇಳಿಕೊಂಡಿದೆ. ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪೃಥ್ವಿರಾಜ್ ಚೌಹಾನ್, ಇಂತಹ ಆರೋಪಗಳು ಆ ಪಕ್ಷದಿಂದ ಹಲವಾರು ಬಾರಿ ಬಂದಿವೆ ಎಂದಿದ್ದಾರೆ.

ಇಂತಹ ರಾಜಕೀಯ ಸೂಕ್ಷ್ಮತೆಯನ್ನು ಹೊಂದಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳ ಆದೇಶದಂತೆ ಸಿಬಿಐ ತನಿಖೆಯನ್ನು ನಡೆಸುತ್ತದೆ ಮತ್ತು ಇದನ್ನು ಕೇಂದ್ರ ವಿಚಕ್ಷಣಾ ದಳ ಮೇಲ್ವಿಚಾರಣೆ ನಡೆಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಆದೇಶದಂತೆ ಸಿಬಿಐ ಕಾರ್ಯಾಚರಿಸುತ್ತದೆ ಎಂದು ಯಾರಾದರೂ ಹೇಗೆ ಹೇಳುತ್ತಾರೆ? ಕ್ರಿಮಿನಲ್‌ಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕೆಂದು ಈ ದೇಶದ ಪ್ರತಿಯೊಬ್ಬರೂ ಬಯಸುತ್ತಾರೆ. ಸಿಬಿಐ ಅದನ್ನು ಮಾಡುತ್ತಿದೆ. ಇಲ್ಲಿ ಯಾರದೇ ಒತ್ತಾಸೆಗಳಿಲ್ಲ ಎಂದಿದ್ದಾರೆ.

ಸಿಬಿಐ ಕೊನೆಗೊಳಿಸುವ ತಂತ್ರ...
ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ನೀಡಿರುವ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ನಾಯಕತ್ವವು ಕೇಂದ್ರೀಯ ತನಿಖಾ ದಳವನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಯ ಈ ನಡೆಯು ನ್ಯಾಯಾಂಗ ನಿಂದನೆ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಯಾವ ಕಾರಣಕ್ಕೂ ಇದು ಸಮರ್ಥನೀಯವಲ್ಲ ಎಂದಿದ್ದಾರೆ.

ಪ್ರಧಾನಿಯವರು ಕರೆದಿದ್ದ ಔತಣಕೂಟವನ್ನು ಬಹಿಷ್ಕರಿಸುವ ಮೂಲಕ ಸಂಪ್ರದಾಯ ವಿರೋಧಿ ನಡವಳಿಕೆಯನ್ನು ಬಿಜೆಪಿ ಪ್ರದರ್ಶಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರು ಸಿಬಿಐ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತನಿಖೆ ಮತ್ತು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ. ಇದು ಸಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು:
** ಗುಜರಾತಲ್ಲಿ ಕಾಂಗ್ರೆಸ್‌ನಿಂದ ಸಿಬಿಐ ದುರ್ಬಳಕೆ: ಬಿಜೆಪಿ
** ಮೋದಿ ಬಲಗೈ ಬಂಟ ಅಮಿತ್ ಬಂಧನಕ್ಕೆ ಸಿಬಿಐ ಕ್ಷಣಗಣನೆ
** ಸೊಹ್ರಾಬುದ್ದೀನ್ ಹತ್ಯೆ; ಮೋದಿ ಸಚಿವರಿಗೆ ಸಿಬಿಐ ಸಮನ್ಸ್
ಸಂಬಂಧಿತ ಮಾಹಿತಿ ಹುಡುಕಿ