ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಹಿನೂರ್ ವಜ್ರ ಭಾರತಕ್ಕೆ ಮರಳಿಸಲ್ಲ: ಬ್ರಿಟೀಷ್ ಪ್ರಧಾನಿ (British Prime Minister | David Cameron | Kohinoor diamond | India)
Bookmark and Share Feedback Print
 
ರಾಣಿಯ ಕಿರೀಟದಲ್ಲಿ ಕೊಹಿನೂರ್ ವಜ್ರ
PR
ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಬೇಕೆಂಬ ಬೇಡಿಕೆಯನ್ನು ಬ್ರಿಟೀಷ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ.

ಹಾಗೊಂದು ವೇಳೆ ಇಂತಹ ಬೇಡಿಕೆಗಳಿಗೆ ಮಣಿದು ಅಮೂಲ್ಯ ವಸ್ತುಗಳನ್ನು ವಾಪಸ್ ಮಾಡಿದಲ್ಲಿ ಬ್ರಿಟನ್ ವಸ್ತುಸಂಗ್ರಹಾಲಯಗಳು ಬರಿದಾಗಬಹುದು ಎಂದು ಭಾರತ ಭೇಟಿಯಲ್ಲಿರುವ ಕ್ಯಾಮರೂನ್ ಅಭಿಪ್ರಾಯಪಟ್ಟರು.

ಕೊಹಿನೂರ್ ವಜ್ರ ಮೂಲಸ್ಥಾನಕ್ಕೆ ಸೇರಬೇಕೆಂದು ಭಾರೀ ವಾದಗಳು ನಡೆಯುತ್ತಿರುವುದು ನನಗೆ ಗೊತ್ತು. ಬ್ರಿಟನ್‌ನ ನಿಲುವು ನಿಮಗೆ ನಿರಾಸೆಯನ್ನುಂಟು ಮಾಡಬಹುದು ಎಂಬುದರ ಕುರಿತು ನನಗೆ ಆತಂಕವೂ ಇದೆ. ಆದರೆ ಕೊಹಿನೂರ್ ತನ್ನ ಜಾಗವನ್ನು ಬದಲಾಯಿಸುವುದಿಲ್ಲ ಎಂದರು.

ಕೊಹಿನೂರ್ ವಜ್ರವನ್ನು ಅದರ ತಾಯ್ನಾಡಿಗೆ ಮರಳಿಸುವ ಕುರಿತು ಮಾತುಕತೆ ನಡೆಸುವಂತೆ ಭಾರತ ಭೇಟಿಗೂ ಮೊದಲು ಭಾರತೀಯ ಮೂಲದ ಇಂಗ್ಲೆಂಡ್ ಸಂಸದ ಕೀತ್ ವಾಜ್ ಅವರು ಪ್ರಧಾನಿ ಕ್ಯಾಮರೂನ್ ಅವರಲ್ಲಿ ಮನವಿಯನ್ನೂ ಮಾಡಿಕೊಂಡಿದ್ದರು. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ನಿಕಟವಾಗಲಿದೆ ಎಂದು ವಾಜ್ ಅಭಿಪ್ರಾಯಪಟ್ಟಿದ್ದರು.

ಆದರೆ ಕ್ಯಾಮರೂನ್ ಭಾರತದ ಎಲ್ಲಾ ಮನವಿಗಳನ್ನೂ ತಿರಸ್ಕರಿಸಿದ್ದು, ಅಮೂಲ್ಯ ವಜ್ರವನ್ನು ವಾಪಸ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೂರೆ ಮಾಡಿದ್ದ ಬ್ರಿಟೀಷರು...
ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಎಂಬಲ್ಲಿಗೆ ಸೇರಿದ 105 ಕ್ಯಾರೆಟ್ ಕೊಹಿನೂರ್ ವಜ್ರವನ್ನು ಬ್ರಿಟಿಷರು ಪಂಜಾಬ್ ಪ್ರಾಂತ್ಯದ ಮಹಾರಾಜ ದುಲೀಪ್ ಸಿಂಗ್ನನ್ನು ಸೋಲಿಸಿ 1849ರಲ್ಲಿ ಇಂಗ್ಲೆಂಡ್‌ಗೆ ಹೊತ್ತೊಯ್ದಿದ್ದರು. ಬಲಿಕ ಅದನ್ನು ಲಾಹೋರ್ ಒಪ್ಪಂದದಂತೆ ಇಂಗ್ಲೆಂಡ್ ರಾಣಿಗೆ ಒಪ್ಪಿಸಲಾಗಿತ್ತು.

ಈ ಕೊಹಿನೂರ್ ವಜ್ರಕ್ಕಾಗಿ ಭಾರತದಲ್ಲಿ ಸಾಕಷ್ಟು ಹೋರಾಟಗಳೇ ನಡೆದಿದ್ದವು. ಹಾಗಾಗಿ ಇದು ಹಿಂದೂ, ಮೊಘಲ್, ಪರ್ಷಿಯನ್, ಅಫ್ಘಾನ್, ಸಿಖ್ ಮತ್ತು ಬ್ರಿಟೀಷ್ ಆಡಳಿತಗಾರರ ಕೈಗಳಲ್ಲಿ ಮಿಂಚಿತ್ತು. ಆದರೆ ಕೊನೆಗೆ ಅದು ಸೇರಿದ್ದು ಬ್ರಿಟೀಷರ ನಾಡಿಗೆ.

ಕೊಹಿನೂರ್ ವಜ್ರ ಹೊರತುಪಡಿಸಿ, ಸುಲ್ತಾನ್‌ಗಂಜ್ ಬುದ್ಧ (ಬರ್ಮಿಂಗ್‌ಹಾಮ್ ಬುದ್ಧ), ಕ್ರಿ.ಶ. 100ಕ್ಕೂ ಮೊದಲಿನ ಅಮರಾವತಿ ಶಿಲ್ಪಗಳು, ಭೋಜ ದೇವಾಲಯಗಳ ಸರಸ್ವತಿ ಪುತ್ಥಳಿ ಸೇರಿದಂತೆ ಹತ್ತು ಹಲವು ಪುರಾತನ ವಸ್ತುಗಳನ್ನು ಬ್ರಿಟೀಷರು ತಮ್ಮ ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಸೂರೆ ಮಾಡಿದ್ದು, ಅವನ್ನೆಲ್ಲ ವಾಪಸ್ ಮಾಡಬೇಕೆಂದು ಭಾರತೀಯ ಪುರಾತತ್ವ ಇಲಾಖೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳುತ್ತಾ ಬಂದಿದೆ.

ಸಂಬಂಧಪಟ್ಟ ಸುದ್ದಿಗಳು:
** ಕೊಹಿನೂರ್ ವಜ್ರ ವಾಪಸ್ ಕೊಡಿ: ಬ್ರಿಟನ್‌ಗೆ ಭಾರತ
** ಕೊಹಿನೂರ್ ವಜ್ರ ವಾಪಸ್ ಕೊಡಲ್ಲ: ಭಾರತಕ್ಕೆ ಬ್ರಿಟನ್
** ಕೊಹಿನೂರ್ ವಾಪಸಾತಿ ಚರ್ಚಿಸಿ: ಕ್ಯಾಮರೂನ್‌ಗೆ ಮನವಿ
ಸಂಬಂಧಿತ ಮಾಹಿತಿ ಹುಡುಕಿ