ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲ್ ಬೆಲೆ ವಿದೇಶಗಳಲ್ಲಿ ಎಷ್ಟಿದೆ, ನಿಮಗೆ ಗೊತ್ತಾ? (Petrol costs in India | cooking gas | kerosene | UPA govt)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಯದ್ವಾತದ್ವಾ ಏರಿಸಿದೆ ಎಂದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಬಾನು ಬಿರಿಯುವಂತೆ ಯದ್ವಾತದ್ವಾ ಹೋರಾಡುತ್ತಿವೆ. ಇಂತಹ ಹೊತ್ತಿನಲ್ಲಿ ವಿದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.

ದೇಶ/ನಗರಪೆಟ್ರೋಲ್ಡೀಸೆಲ್ಸೀಮೆಎಣ್ಣೆಅಡುಗೆ ಅನಿಲ
ನವದೆಹಲಿ51.4537.6212.32345.35
ಬೆಂಗಳೂರು58.2642.40----
ಪಾಕಿಸ್ತಾನ35.7739.2135.94576.68
ಬಾಂಗ್ಲಾದೇಶ49.7029.4129.41536.91
ಶ್ರೀಲಂಕಾ47.3229.8821.01768.91
ನೇಪಾಳ50.8539.2139.21775.54
ಅಮೆರಿಕಾ34.00------
ಬ್ರಿಟನ್91.0088.00----

(ಕೋಷ್ಟಕದಲ್ಲಿ ನಮೂದಿಸಲಾಗಿರುವ ದರಗಳು ಲೀಟರ್ ಮತ್ತು ರೂಪಾಯಿಗಳನ್ನು ಅವಲಂಬಿಸಿದೆ)

ನಮ್ಮ ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಭಾರತದಲ್ಲಿ ಪೆಟ್ರೋಲ್ ದರ ಕೊಂಚ ದುಬಾರಿ. ಇದು ಡೀಸೆಲ್‌ಗೂ ಅನ್ವಯವಾಗುತ್ತದೆ. ಆದರೆ ದಿನನಿತ್ಯ ಬಳಕೆಯ ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿ ಅಗ್ಗದಲ್ಲೇ ದೊರೆಯುತ್ತಿದೆ.

ಕೇಂದ್ರವು ಜೂನ್ 25ರಂದು ಪೆಟ್ರೋಲ್ ದರದಲ್ಲಿ 3.73 ರೂಪಾಯಿ, ಡೀಸೆಲ್ ದರದಲ್ಲಿ 2 ರೂಪಾಯಿ, ಅಡುಗೆ ಅನಿಲದಲ್ಲಿ 35 ರೂಪಾಯಿ ಹಾಗೂ ಸೀಮೆಎಣ್ಣೆ ದರವನ್ನು 3 ರೂಪಾಯಿ ಏರಿಕೆ ಮಾಡಿತ್ತು. ಅಲ್ಲದೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರುಕಟ್ಟೆಯಾಧರಿತವಾಗಿ ಇಡುವ ನಿಟ್ಟಿನಲ್ಲಿ ಪೆಟ್ರೋಲನ್ನು ಮಾತ್ರ ನಿಯಂತ್ರಣ ಮುಕ್ತವಾಗಿಡುವ ನಿರ್ಧಾರಕ್ಕೆ ಬಂದಿತ್ತು.

ಸಂಬಂಧಪಟ್ಟ ಸುದ್ದಿಗಳಿವು:
** ಪೆಟ್ರೋಲ್, ಡೀಸೆಲ್ ನೈಜ ಬೆಲೆ ನೀವಂದುಕೊಂಡಷ್ಟಿಲ್ಲ
** ಪಾಕಿಸ್ತಾನದಲ್ಲಿ 1 ಲೀ. ಪೆಟ್ರೋಲ್‌ಗೆ ಕೇವಲ 36 ರೂ.
** ಪೆಟ್ರೋಲ್‌ 3, ಡೀಸೆಲ್ 2, ಸೀಮೆಣ್ಣೆ 3, ಎಲ್ಪಿಜಿ 35 ರೂ. ಏರಿಕೆ!
ಸಂಬಂಧಿತ ಮಾಹಿತಿ ಹುಡುಕಿ