ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದನಿ ಓರ್ವ ರೂಢಿಗತ ಭಯೋತ್ಪಾದಕ: ವಿಎಚ್‌ಪಿ (habitual terrorist | VHP | PDP | Abdul Nasser Madani)
Bookmark and Share Feedback Print
 
2008ರ ಬೆಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು 'ಚಾಳಿಗೆ ಬಿದ್ದ ಭಯೋತ್ಪಾದಕ' ಎಂದು ಬಣ್ಣಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್, ಆತನ ಬಂಧನಕ್ಕೆ ಅಡ್ಡಗಾಲಾಗಿರುವವರು ಭಯೋತ್ಪಾದನೆಯನ್ನೆಸಗಲು ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿಂಘಾಲ್, 'ಮದನಿ ಓರ್ವ ರೂಢಿಗತ ಭಯೋತ್ಪಾದಕ. ಆತನನ್ನು ಬಂಧಿಸಲು ಬಿಡದೇ ಇರುವವರು ಕೂಡ ಅದೇ ಸಾಲಿಗೆ ಸೇರಿದವರು. ಅವರೇನು (ಬಂಧನ ತಡೆಯುತ್ತಿರುವವರು) ಮಾಡಲು ಬಯಸುತ್ತಿದ್ದಾರೆ? ಅವರು ಭಯೋತ್ಪಾದನೆಯನ್ನು ಮುಂದುವರಿಸಲು ಇಚ್ಛಿಸುತ್ತಿದ್ದಾರೆ' ಎಂದರು.

ಈ ದೇಶದಲ್ಲಿ ಭಯೋತ್ಪಾದಕರನ್ನು ಮುಕ್ತವಾಗಿ ಬಿಟ್ಟಿರುವ ಕಾರಣದಿಂದಲೇ ಮತ್ತೆ ಮತ್ತೆ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಸರಕಾರಗಳ ವಿರುದ್ಧ ಟೀಕೆ ವ್ಯಕ್ತಪಡಿಸಿದರು.

ಮದನಿ ಓರ್ವ ಭಯೋತ್ಪಾದಕ. ಆದರೆ ಅವರು (ಕೇರಳ ಸರಕಾರ) ಇಂತಹ ವ್ಯಕ್ತಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಯಾಕೆ? ಯಾಕೆಂದರೆ ತಮ್ಮ ಓಟಿನ ಹಸಿವನ್ನು ನೀಗಿಸಿಕೊಳ್ಳಲು... ಇದೇ (ಭಯೋತ್ಪಾದನೆ) ಕಾರಣದಿಂದ ದೇಶದಲ್ಲಿ ಭಾರೀ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಎಂದು ಸಿಂಘಾಲ್ ಅಭಿಪ್ರಾಯ ಪಟ್ಟಿದ್ದಾರೆ.

ದೇಶದಲ್ಲಿನ ಅತಿ ದೊಡ್ಡ ಸಮಸ್ಯೆ ಪ್ರತ್ಯೇಕತಾವಾದ ಎಂದು ಈ ಹಿಂದೆ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.

2001ರ ಡಿಸೆಂಬರ್ ತಿಂಗಳಲ್ಲಿ ಸಂಸತ್ತಿನ ಮೇಲೆ ದಾಳಿ ಪಿತೂರಿಗಾಗಿ 2004ರಲ್ಲಿ ಮರಣ ದಂಡನೆ ಶಿಕ್ಷೆಯನ್ನು ಪಡೆದುಕೊಂಡಿರುವ ಅಫ್ಜಲ್ ಗುರು ಪ್ರಕರಣವನ್ನು ತನ್ನ ಮಾತಿನ ನಡುವೆ ಉಲ್ಲೇಖಿಸಿರುವ ವಿಎಚ್‌ಪಿ ಮುಖಂಡ, ಆತನಿಗೆ ಇನ್ನಷ್ಟೇ ಶಿಕ್ಷೆ ನೀಡಬೇಕಾಗಿದೆ; ಕೇವಲ ಮುಸ್ಲಿಮರ ಓಟಿಗಾಗಿ ಸರಕಾರವು ಬಹುದೊಡ್ಡ ತ್ಯಾಗ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೇರಳ ಮುಖ್ಯಮಂತ್ರಿ ಅಚ್ಯುತ್ತಾನಂದನ್ ಅವರು ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಮುದ್ದು ಮಾಡುತ್ತಿದ್ದಾರೆ. ಇದೇ ರೀತಿ ಕಾಶ್ಮೀರದಲ್ಲೂ ನಡೆಯುತ್ತಿದೆ. ಇಡೀ ದೇಶಕ್ಕೆ ಸೇರಿದ ಕಾಶ್ಮೀರವನ್ನು ಅವರೀಗ (ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ) ಸ್ವಾಯತ್ತ ಸ್ಥಿತಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದಾರೆ ಎಂದರು.

ಸಂಬಂಧಪಟ್ಟ ಸುದ್ದಿಗಳು:
** ಮದನಿ ಶರಣಾಗತಿಗೆ ಆಚಾರ್ಯ ಅಂತಿಮ 'ಡೆಡ್‌ಲೈನ್'
** ಸುಪ್ರೀಂ ಮೊರೆ ಹೋದ ಅಬ್ದುಲ್ ನಾಸಿರ್ ಮದನಿ
** ನನ್ನ ಬಂಧಿಸಿದ್ರೆ ಕೋಮುದಳ್ಳುರಿ ನಡೆಯುತ್ತೆ-ಮದನಿ
ಸಂಬಂಧಿತ ಮಾಹಿತಿ ಹುಡುಕಿ