ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋರ್ಟ್ ತೀರ್ಪು ಸ್ಫೂರ್ತಿ: ಮತ್ತೆ ವಿಶ್ವಾಸಮತಕ್ಕೆ ಬಿಜೆಪಿ ಸಿದ್ಧ (BJP | Karnataka Government | Karnataka Crisis | Vote of Confidence)
Bookmark and Share Feedback Print
 
ಹೈಕೋರ್ಟ್ ತೀರ್ಪಿನಿಂದ ಸ್ಫೂರ್ತಿ ಪಡೆದಂತಿರುವ ರಾಜ್ಯ ಬಿಜೆಪಿ, ಅಕ್ಟೋಬರ್ 14ರಂದು ಮತ್ತೊಮ್ಮೆ ವಿಶ್ವಾಸಮತ ಸಾಬೀತಿಗೆ ಸಿದ್ಧ ಎಂದು ಘೋಷಿಸಿದ್ದು, ಈಗಾಗಲೇ ದೆಹಲಿಗೆ ಹೋಗಿರುವ ಬಿಜೆಪಿ ಶಾಸಕರೆಲ್ಲರೂ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಾರಿ, ಮರಳಿ ಗೋಲ್ಡನ್ ಪಾಮ್ ರೆಸಾರ್ಟ್ ಸೇರಿಕೊಳ್ಳಲಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದು ದೃಢಪಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಈ ವಿಷಯ ತಿಳಿಸಿದ್ದು, ಅ.11ರಂತೆಯೇ ವಿಶ್ವಾಸ ಮತವನ್ನು ಪುನಃ ಗೆದ್ದು ಬರುವುದಾಗಿ ಹೇಳಿದರಲ್ಲದೆ, ಕನ್ನಡ ನಾಡಿನ ಅಭಿವೃದ್ಧಿಗೆ ಕನ್ನಡಿಗರ ಆಶೀರ್ವಾದ ತನಗಿದೆ ಎಂದು ಹೇಳಿದರು.

ಇದಕ್ಕೆ ಮೊದಲು, ರಾಜ್ಯಪಾಲರು ಅ.11ರ ವಿಶ್ವಾಸಮತ ಸರಿ ಇರಲಿಲ್ಲ, ಹೀಗಾಗಿ ಮರಳಿ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡುವುದಾಗಿ, ಅ.14ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಕೋರಿದ್ದರು.

ನವದೆಹಲಿಯಲ್ಲಿ ಎಲ್.ಕೆ.ಆಡ್ವಾಣಿ ನಿವಾಸದಲ್ಲಿ ಸಭೆ ಸೇರಿದ ಬಳಿಕ ಬಿಜೆಪಿ ಮುಖಂಡರು ಪುನಃ ವಿಶ್ವಾಸಮತ ಕೋರುವ ತೀರ್ಮಾನಕ್ಕೆ ಬಂದಿದ್ದರು.

ಶಾಸಕರ ಅನರ್ಹತೆ ವಿಚಾರವಾಗಿ ಹೈಕೋರ್ಟ್ ತೀರ್ಮಾನವು ಅಕ್ಟೋಬರ್ 18ರ ನಂತರವೇ ದೊರೆಯುವುದರಿಂದ ಮತ್ತು ಯಾವುದೇ ಮಧ್ಯಂತರ ಆದೇಶವನ್ನೂ ಜಾರಿಗೊಳಿಸದೇ ಇರುವುದರಿಂದಾಗಿ, ಸಂಖ್ಯಾಬಲವು ತಮ್ಮ ಕಡೆಗಿರುವುದರಿಂದ ಬಿಜೆಪಿ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.

11 ತಾರೀಕಿಗೇ ಬಹುಮತ ಸಿದ್ಧಪಡಿಸಿ ತೋರಿಸಿದ್ದೇವೆ. ಯಾವುದೇ ಕ್ಷಣ ತೋರಿಸಲೂ ನಮಗೆ ಆಕ್ಷೇಪಗಳಿಲ್ಲ. ಆದರೆ ಘನತೆವೆತ್ತ ರಾಜ್ಯಪಾಲರು ತಮ್ಮ ಧೋರಣೆಯನ್ನು ಆಗಾಗ್ಗೆ ಬದಲಾಯಿಸುತ್ತಿರುವುದಕ್ಕೇ ನಮ್ಮ ಆಕ್ಷೇಪ ಎಂದು ದೆಹಲಿಯಲ್ಲಿ ಬಿಜೆಪಿ ಸರಕಾರದ ಪ್ರತಿನಿಧಿಯಾಗಿರುವ ಧನಂಜಯ ಕುಮಾರ್ ತಿಳಿಸಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮುಖಂಡರೆಲ್ಲರೂ ಇದೀಗ ರಾಜಭವನಕ್ಕೆ ಧಾವಿಸಿ, ರಾಜ್ಯಪಾಲ ಹಂಸರಾಜ ಭಾರದ್ವಾಜ್‌ರೊಂದಿಗೆ ಭಾರೀ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಬಂಡಾಯ ಶಾಸಕರೆಲ್ಲರೂ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದರೆ, ಬಿಜೆಪಿ ಶಾಸಕರೆಲ್ಲರೂ ಗೋಲ್ಡನ್ ಪಾಮ್ ರೆಸಾರ್ಟ್ ಸೇರಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರು ಹೊರವಲಯದ ರೆಸಾರ್ಟ್‌ನಿಂದ ರಾಜಭವನಕ್ಕೆ ಹೆಲಿಕಾಪ್ಟರ್ ಮೇಲೇರಿ ಧಾವಂತದಿಂದ ಧಾವಿಸಿದರು. ಅವರು ಅಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ದೇಶಪಾಂಡೆ ಅವರನ್ನು ಕೂಡಿಕೊಂಡಿದ್ದಾರೆ.

ಇವತ್ತಿನ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾದ ಸುದ್ದಿಗಳು...
ಬಂಡಾಯ ಭಿನ್ನರ ತೀರ್ಪು ಕಾಯ್ದಿರಿಕೆ, ಪಕ್ಷೇತರರ ವಿಚಾರಣೆ 18ಕ್ಕೆ
14ಕ್ಕೆ ಮತ್ತೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರ ಸೂಚನೆ
ರಾಜಕಾರಣಿಗಳ ಸೋಮವಾರದ ದೊಂಬರಾಟ
ಸಂಬಂಧಿತ ಮಾಹಿತಿ ಹುಡುಕಿ