ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪುನಃ ಫೈನಲ್: ಬಿಜೆಪಿಗೆ ಸಂಖ್ಯೆಯ ಬಲ, ಲೆಕ್ಕಾಚಾರ ಹೀಗೆ! (Vote of Confidence | Karnataka Crisis | BJP | Yaddyurappa | High Court)
Bookmark and Share Feedback Print
 
ಯಡಿಯೂರಪ್ಪ ಸರಕಾರಕ್ಕೆ ಅ.14ಕ್ಕೆ ಪುನಃ ವಿಶ್ವಾಸ ಮತ ಸಾಬೀತುಪಡಿಸಲು ರಾಜ್ಯಪಾಲರು ಅವಕಾಶ ನೀಡಿರುವುದು ಹಾಗೂ ಬಂಡಾಯ ಶಾಸಕರ ಅನರ್ಹತೆ ವಿಚಾರದಲ್ಲಿ ಹೈಕೋರ್ಟ್ ಮಂಗಳವಾರ ನೀಡಿರುವ ತೀರ್ಪುಗಳನ್ನು ಗಮನಿಸಿದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಪುನಃ ವಿಶ್ವಾಸ ಮತ ಸಾಬೀತುಪಡಿಸಲು ಒಪ್ಪಿದೆ. ಹೀಗಾಗಿ ಇಲ್ಲಿ ಸಂಖ್ಯಾ ಬಲ ಮುಖ್ಯವಾಗುತ್ತದೆ. ಇದಕ್ಕೆ ಹೈಕೋರ್ಟ್ ತೀರ್ಪು ಅನ್ವಯವಾಗುತ್ತದೆ. ಹೀಗಾಗಿಯೇ ಎದೆಯುಬ್ಬಿಸಿಕೊಂಡಿರುವ ಬಿಜೆಪಿ ಇದೀಗ ಮತ್ತೊಂದು ಫೈನಲ್ ಪಂದ್ಯಕ್ಕೆ ವಿಧಾನಸೌಧ ಸಜ್ಜಾಗುತ್ತಿದೆ. ಮಗದೊಂದು ಮನರಂಜನಾ ಪರ್ವ ತೆರೆದುಕೊಳ್ಳುತ್ತಿದೆ.

ಏನಾಗುತ್ತದೆ...
* ಹೈಕೋರ್ಟ್ ಇದೀಗ ಇನ್ನೂ ತೀರ್ಪು ನೀಡದೇ ಇರುವ ಹಿನ್ನೆಲೆಯಲ್ಲಿ ಹಾಗೂ ಐವರು ಪಕ್ಷೇತರ ಶಾಸಕರ ಅನರ್ಹತೆಯ ವಿಚಾರಣೆಯೇ ಅ.14ರ ಬಳಿಕ (ಅ.18ಕ್ಕೆ) ನಡೆಯಲಿರುವುದರಿಂದ ಸ್ಪೀಕರ್ ಅವರ ಅನರ್ಹತೆಯ ಆದೇಶ ಅದುವರೆಗೂ ಸಿಂಧುವಾಗಿರುತ್ತದೆ. ಹೀಗಾಗಿ 224 ಸದಸ್ಯಬಲದ ವಿಧಾನಸಭೆಯ ವಾಸ್ತವಿಕ ಸಂಖ್ಯಾಬಲವು 224-16 = 208ಕ್ಕೆ ಇಳಿಯುತ್ತದೆ. ಈ ಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯಾಬಲವು 105.

* 5 ಪಕ್ಷೇತರ ಶಾಸಕರಿಗೆ ಅ.14ರ ಕಲಾಪದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

* ಬಂಡಾಯ 11 ಬಿಜೆಪಿ ಶಾಸಕರಿಗೆ ಹೈಕೋರ್ಟ್ ಏನಾದರೂ ನಾಳೆ ತೀರ್ಪು ನೀಡಿದರೆ ಅನರ್ಹಗೊಳ್ಳಬಹುದು ಅಥವಾ ಅನರ್ಹತೆ ರದ್ದಾಗಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲೂಬಹುದು.

* ಸದ್ಯಕ್ಕೆ ಬಿಜೆಪಿಯ ಬಳಿ 106 ಮಂದಿ ಶಾಸಕರಿದ್ದಾರೆ. (116+1 ಸ್ಪೀಕರ್ ಮತಗಳಿವೆ. ಇವರಲ್ಲಿ 11 ಮಂದಿ ಬಂಡಾಯವೆದ್ದು ಹೋದರು)

* ಸ್ಪೀಕರ್ ಮತ ಚಲಾಯಿಸುವುದು ಟೈ ಆದಾಗ ಮಾತ್ರ

* ಉಳಿದಂತೆ ಕಾಂಗ್ರೆಸ್ 73, ಜೆಡಿಎಸ್ 28 ಸೇರಿದರೆ ಪ್ರತಿಪಕ್ಷದ ಸಂಖ್ಯಾಬಲ 101 ಮಾತ್ರ ಆಗುತ್ತದೆ.

* 11 ಶಾಸಕರ ಅನರ್ಹತೆಯೇನಾದರೂ ರದ್ದಾದರೆ, (ಅಂದರೆ ಹೈಕೋರ್ಟ್ ಈ ಕುರಿತು ಬುಧವಾರ ತೀರ್ಪು ನೀಡಿದರೆ), ಪ್ರತಿಪಕ್ಷಕ್ಕೆ ಮೇಲುಗೈಯಾಗುತ್ತದೆ, ಬಿಜೆಪಿ ಸರಕಾರ ಉರುಳುತ್ತದೆ.

* 11 ಬಿಜೆಪಿ ಶಾಸಕರ ಅನರ್ಹತೆ ಸಿಂಧು ಎಂದು ಹೈಕೋರ್ಟ್ ತೀರ್ಪು ನೀಡಿದರೆ ಸದನದ ಬಲಾಬಲ ಬಿಜೆಪಿ ಪರ 106 (ಅಂದರೆ ಮ್ಯಾಜಿಕ್ ಸಂಖ್ಯೆ 105ಕ್ಕಿಂತ ಒಂದು ಹೆಚ್ಚು), ಪ್ರತಿಪಕ್ಷಗಳ ಪರ 101 ಇರುತ್ತದೆ.

* ಇನ್ನು, ಎರಡೂ ಕಡೆಗಳಲ್ಲಿ ಒಬ್ಬೊಬ್ಬ ಶಾಸಕನ ನಿಷ್ಠೆ ಕೊನೆ ಕ್ಷಣದಲ್ಲಿ ಬದಲಾಗಿದ್ದನ್ನು ಕಂಡಿದ್ದೇವೆ. ಅಂದರೆ ಬಿಜೆಪಿಯ ಮಾನಪ್ಪ ವಜ್ಜಲ್ ಬಂಡಾಯ ಪಾಳಯದಲ್ಲಿ ಗುರುತಿಸಿಕೊಂಡಿದ್ದರೆ, ಜೆಡಿಎಸ್‌ನ ಅಶ್ವಥ್ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಂದರೆ ಎರಡೂ ಕಡೆಗೆ ಒಂದು ಪ್ಲಸ್, ಒಂದು ಮೈನಸ್ ಆಗುತ್ತದೆ. ಸಂಖ್ಯೆ ಯಥಾಸ್ಥಿತಿ (106 ಮತ್ತು 101) ಇರುತ್ತದೆ.

ಗ, ಪಕ್ಷೇತರರು ಮತ್ತು ಬಂಡಾಯ ಶಾಸಕರಿಗೆ ವಿಶ್ವಾಸಮತ ಕಲಾಪದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಯಾವುದೇ ಮಧ್ಯಂತರ ಆದೇಶವನ್ನೂ ಹೈಕೋರ್ಟ್ ಇದುವರೆಗೆ ನೀಡಿಲ್ಲ. ನಾಳೆ ಏನಾದರೂ ಹೈಕೋರ್ಟಿಗೆ ಪ್ರತಿಪಕ್ಷಗಳು ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಸಲ್ಲಿಸಿದರೆ.... ಎಂಬ "...ರೆ" ಅಂಶವೂ ಇಲ್ಲಿದೆ.

ಹಾಗಿದ್ದರೆ ಈ ಹಂತದಲ್ಲಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಧೈರ್ಯದಿಂದ ಗೆದ್ದೆವೆಂದು ಬೀಗಬಹುದೇ? ಖಂಡಿತಾ ಹೇಳಲಾಗುವುದಿಲ್ಲ. ಬಾಕಿ ಉಳಿದಿರುವ ಸಮಯದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು, ಯಾರು ಯಾರನ್ನು ಬೇಕಾದರೂ ಮಾರಿಕೊಳ್ಳಬಹುದು ಎಂದು ಖಚಿತವಾಗಿ ಹೇಳಬಹುದಾಗಿರುವುದರಿಂದ, ಬಿಜೆಪಿಯಿಂದ ಕೆಲವು ಕಪ್ಪೆಗಳು ಅತ್ತ ಕಡೆ ಹಾರಿದರೆ ಅಥವಾ ನಾಪತ್ತೆಯಾದರೆ ಮತ್ತು ಕಾಂಗ್ರೆಸ್-ಜೆಡಿಎಸ್‌ಗಳಿಂದಲೂ ಕೆಲವು ಕಪ್ಪೆಗಳು ನಾಪತ್ತೆಯಾದರೆ-ಹಾರಿದರೆ ಏನೂ ಆಗಬಹುದು!

[ಇತ್ತೀಚಿನ ವರದಿ ಪ್ರಕಾರ, ಪ್ರತಿಪಕ್ಷ ಮುಖಂಡರಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಆರ್.ವಿ.ದೇಶಪಾಂಡೆ ಅವರು ರಾಜಭವನದಲ್ಲಿ ಗಂಭೀರ ಚರ್ಚೆ ನಡೆಸಿದ್ದು, ಚರ್ಚೆಯ ವೇಳೆ ಏನು ಮಾತುಕತೆ ನಡೆಯಿತೆಂಬುದು ಇನ್ನೂ ತಿಳಿದುಬಂದಿಲ್ಲ. ಮತ್ತು ವಿಪಕ್ಷಗಳ ನಡೆಯೇನು ಎಂಬುದು ಇನ್ನೂ ಕುತೂಹಲಕಾರಿಯಾಗಿದೆ.]

ಇವತ್ತಿನ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾದ ಸುದ್ದಿಗಳು...
ಪುನಃ ಬಹುಮತ ಸಾಬೀತಿಗೆ ಬಿಜೆಪಿ ಸಿದ್ಧ
ಬಂಡಾಯ ಭಿನ್ನರ ತೀರ್ಪು ಕಾಯ್ದಿರಿಕೆ, ಪಕ್ಷೇತರರ ವಿಚಾರಣೆ 18ಕ್ಕೆ
14ಕ್ಕೆ ಮತ್ತೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರ ಸೂಚನೆ
ರಾಜಕಾರಣಿಗಳ ಸೋಮವಾರದ ದೊಂಬರಾಟ
ಸಂಬಂಧಿತ ಮಾಹಿತಿ ಹುಡುಕಿ