ಲೆನಿನ್ ಹಿಂದೆ ಕ್ರೈಸ್ತ ಮಿಷನರಿ; ಬೆಂಗಳೂರಿನಲ್ಲಿ ರಂಜಿತಾ ಸ್ಪಷ್ಟನೆ
ಬೆಂಗಳೂರು, ಶುಕ್ರವಾರ, 31 ಡಿಸೆಂಬರ್ 2010( 16:15 IST )
WD
ರಾಸಲೀಲೆ ಸಿಡಿ ಬಿಡುಗಡೆಯಾಗುವ ಸಂದರ್ಭದಲ್ಲಿ ನಾನು ಅಮೆರಿಕದಲ್ಲಿ ಇದ್ದೆ. ಅಲ್ಲದೇ ರಾಸಲೀಲೆ ದೃಶ್ಯಾವಳಿ ನಿಜವಲ್ಲ. ಬಿಡುಗಡೆಯಾಗಿರುವ ಅಶ್ಲೀಲ ದೃಶ್ಯಗಳಲ್ಲಿ ನಾನಿಲ್ಲ. ಸಿಡಿಯಲ್ಲಿರೋದೆಲ್ಲಾ ಬೋಗಸ್. ಇದೆಲ್ಲವೂ ಲೆನಿನ್ ಕರುಪ್ಪನ್ ಸಂಚು ಎಂದು ಗಂಭೀರವಾಗಿ ಆರೋಪಿಸಿದರು.
ಘಟನೆ ನಂತರ ನಾನು ತಲೆಮರೆಸಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಿಸಲಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಏನೂ ಹೇಳಬಾರದೆಂದು ಜೀವ ಬೆದರಿಕೆ ಒಡ್ಡಲಾಗಿತ್ತು. ಯಾವುದೇ ಸತ್ಯಾಂಶ ಹೊರಗೆಡಹಬಾರದೆಂದು ನನಗೆ ಹೆದರಿಸಲಾಗಿತ್ತು. ಬಾಯಿ ಬಿಟ್ಟರೆ ತನ್ನ ಮೇಲೆ ಮಾದಕ ದ್ರವ್ಯ ಕೇಸು, ವೇಶ್ಯಾವಾಟಿಕೆ ಕೇಸು ಹಾಕಿ ಬಂಧಿಸಲಾಗುತ್ತದೆ ಮತ್ತು ಜೀವ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ರಂಜಿತಾ ವಿವರಿಸಿದರು.
ನಾನು ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಂಡಿಲ್ಲ. ಯಾವುದೇ ರಹಸ್ಯ ಸ್ಥಳದಲ್ಲಿಯೂ ನಾನು ಅಡಗಿ ಕೂತುಕೊಂಡಿರಲಿಲ್ಲವಾಗಿತ್ತು. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಈ ವಿವಾದದ ನಂತರ ಬಹಳಷ್ಟು ನೊಂದಿದ್ದೇನೆ ಎಂದು ರಂಜಿತಾ ಈ ಸಂದರ್ಭದಲ್ಲಿ ಹೇಳಿದರು.