ಲೆನಿನ್ ಹಿಂದೆ ಕ್ರೈಸ್ತ ಮಿಷನರಿ; ಬೆಂಗಳೂರಿನಲ್ಲಿ ರಂಜಿತಾ ಸ್ಪಷ್ಟನೆ
ಬೆಂಗಳೂರು, ಶುಕ್ರವಾರ, 31 ಡಿಸೆಂಬರ್ 2010( 15:53 IST )
WD
ತಾಕತ್ತಿದ್ರೆ ನಿತ್ಯಾನಂದನ ಎದುರು ಮಾತನಾಡಿ; ನನಗೆ ಯಾವುದೇ ಪ್ರಭಾವಿಗಳ ಬೆಂಬಲವಿರಲಿಲ್ಲ. ನನ್ನನ್ನು ಬೆಂಬಲಿಸುವವರು ಯಾರೂ ಇರಲಿಲ್ಲ. ಹಾಗಾಗಿ ನನ್ನನ್ನು ಗುರಿ ಮಾಡಲಾಯಿತು ಎಂದು ಆರೋಪಿಸಿರುವ ರಂಜಿತಾ, ರಾಸಲೀಲೆ ಸಿಡಿಯಲ್ಲಿ ಇರೋದು ನೀವೆ ಅಲ್ಲವೇ ಎಂಬ ಪ್ರಶ್ನೆಗೆ ನಿಮಗೆ ಧೈರ್ಯವಿದ್ದರೆ ನಿತ್ಯಾನಂದನ ಎದುರು ನಿಂತು ಕೇಳಿ ಎಂದು ರೇಗಿದರು.
ನಾನು ಎಂದಿಗೂ ನಿತ್ಯಾನಂದ ಸ್ವಾಮಿಯ ಭಕ್ತೆಯಾಗಿಯೇ ಇರುತ್ತೇನೆ. ಅವಕಾಶ ದೊರೆತರೆ ಮತ್ತೆ ನಿತ್ಯಾನಂದ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿಯೂ ಈ ಸಂದರ್ಭದಲ್ಲಿ ತಮ್ಮ ಇಚ್ಛೆಯನ್ನು ಹೊರಹಾಕಿದರು.
ವೀಡಿಯೋ ಬಗ್ಗೆ ಬಾಯಿ ಬಿಟ್ಟರೆ ಡ್ರಗ್ ಮತ್ತು ಪ್ರಾಸ್ಟಿಟ್ಯೂಷನ್ ಕೇಸು, ಅರೆಸ್ಟ್ ಮಾಡಿಸುವ ಬೆದರಿಕೆ ಒಡ್ಡಿದ್ದರು. ಹಾಗಾಗಿ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡದಿರಲು ಕಾರಣ ಎಂದರು. ಅಷ್ಟೇ ಅಲ್ಲ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಲೆನಿನ್ ವಿರುದ್ಧ ಗುರುವಾರ ರಾಮನಗರ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.