ಲೆನಿನ್ ಹಿಂದೆ ಕ್ರೈಸ್ತ ಮಿಷನರಿ; ಬೆಂಗಳೂರಿನಲ್ಲಿ ರಂಜಿತಾ ಸ್ಪಷ್ಟನೆ
ಬೆಂಗಳೂರು, ಶುಕ್ರವಾರ, 31 ಡಿಸೆಂಬರ್ 2010( 16:16 IST )
WD
ನನ್ನ ವಿರುದ್ಧ ಈ ಹಿಂದೆ ಮಾಡಿದ್ದ ಆರೋಪಗಳೆಲ್ಲ ಸುಳ್ಳು. ಸಿಡಿ ವಿಚಾರ ಕುರಿತಂತೆ ಯಾವುದೇ ಮಾಧ್ಯಮಗಳು ನನ್ನ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳು ನನ್ನ ಖಾಸಗಿತನವನ್ನು ಗೌರವಿಸಿವೆ. ಆದರೆ ಕೆಲವು ಮಾಧ್ಯಮಗಳ ನನ್ನ ವೈಯಕ್ತಿಕ ಜೀವನದ ಬಗ್ಗೆ ಏನೇನೂ ವರದಿ ಮಾಡಿದ್ದವು ಇದರಿಂದ ತನ್ನ ಜೀವನಕ್ಕೆ ಧಕ್ಕೆ ಆಗಿರುವುದಾಗಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಅಡಗಿಕೊಂಡಿದ್ದೇನೆ, ನಾಪತ್ತೆಯಾಗಿದ್ದೇನೆ ಎಂಬೆಲ್ಲ ಊಹಾಪೋಹಕ್ಕೆ ಸ್ಪಷ್ಟನೆ ನೀಡಲು ಈ ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ನನ್ನ ಕುಟುಂಬಕ್ಕೆ ನನ್ನ ಮೇಲೆ ನಂಬಿಕೆಯಿದೆ. ನಾನು ಹಾಗೆ ಮಾಡಿಲ್ಲ. ಹಾಗಾಗಿ ಕುಟುಂಬ ವರ್ಗ ನನ್ನ ನಂಬಿದ್ದಕ್ಕೆ ದೇವರಿಗೆ ಋಣಿಯಾಗಿರುತ್ತೇನೆ. ನನ್ನ ವಿರುದ್ಧ ಆರೋಪಗಳನ್ನು ಮಾಡುವವರು, ನನ್ನ ಸ್ಥಾನದಲ್ಲಿ ನಿಂತು ಯೋಚಿಸಿ. ಮಹಿಳೆಯನ್ನು ದಾಳವನ್ನಾಗಿ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡ ರಂಜಿತಾ ತಮ್ಮ ಮಾತಿನುದ್ದಕ್ಕೂ ಸಿಡಿಯಲ್ಲಿರುವುದು ತಾನಲ್ಲ ಎಂಬುದಾಗಿ ಪ್ರತಿಪಾದಿಸಿದರು.